

ಬೀದರ್: ಮಹಾತ್ಮರು, ಮಹಾನ್ ಪುರುಷರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ. ಮನುಕುಲಕ್ಕೆ ಅವರು ತೋರಿದ ಆದರ್ಶ ಮಾರ್ಗದಲ್ಲಿ ಎಲ್ಲರೂ ನಡೆಯಲು ಪ್ರಯತ್ನಸಬೇಕಿದೆ ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮ. ಹೇಳಿದರು.
ಇಲ್ಲಿನ ವಿಶ್ವ ಹಿಂದು ಪರಿಷತ್ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅವರು ರಚಿಸಿದ ರಾಮಾಯಣ ಜಗತ್ತಿನ ಶ್ರೇಷ್ಠ ಮಹಾಕಾವ್ಯ ಎಂದರು.
ಪ್ರಮುಖರಾದ ರೋಹಿತ್ ಗುರೂಜಿ, ಅನಂತರಡ್ಡಿ ಮಿರ್ಜಾಪುರ, ವಿಜಯಕುಮಾರರಡ್ಡಿ, ಶಂಕರ ಖ್ಯಾಮಾ ಇತರರು ಇದ್ದರು.