

ಬೀದರ್: ಅತಿವೃಷ್ಟಿ ಹಾಗೂ ಪ್ರವಾಹದಿಂದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬಹಳಷ್ಟು ಹಾನಿಯಾಗಿದೆ. ಪ್ರತಿ ಎಕರೆಗೆ 30 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕನ್ನಡಿಗರ ರಕ್ಷಣಾ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು.
ಇಲ್ಲಿ ಪ್ರತಿಭಟನೆ ನಡೆಸಿ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಸೋಯಾಬೀನ್, ಹೆಸರು, ಉದ್ದು ಸೇರಿದಂತೆ ಬಹುತೇಕ ಬೆಳೆಗಳು ಹಾಳಾಗಿವೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ 10 ಸಾವಿರ ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಧಾನಿ ಅವರಿಗೆ ಬರೆದ ಮನವಿಪತ್ರವನ್ನು ಸಹಾಯಕ ಆಯುಕ್ತ ಶಕೀಲ್ ಅಹ್ಮದ್ ಅವರಿಗೆ ಸಲ್ಲಿಸಲಾಯಿತು.
ಕನ್ನಡಿಗರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಕಾಂತ ಭವಾನಿ, ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಡಾ.ಸುಬ್ಬಣ್ಣ ಕರಕನಳ್ಳಿ, ಪ್ರಮುಖರಾದ ರಾಘವೇಂದ್ರ, ಸೂರ್ಯಕಾಂತ ಕನ್ನಾಳೆ, ಆನಂದ ಪಾಟೀಲ್, ಪ್ರವೀಣಕುಮಾರ ಭಾಗ್ಯಾನೋರ್, ವಿಜಯಕುಮಾರ ಮೋರ್ಗಿಕರ್, ಮಾಣಿಕ ಮೇತ್ರೆ, ರವಿಕುಮಾರ ಔರಾದಕರ್, ಸ್ಟಾ ಸ್ಟ್ಯಾಲಿನ್, ಈಶ್ವರ ಬಾಚಪಳ್ಳಿ, ಸಂಜುಕುಮಾರ ತಡಪಳ್ಳಿ, ಎಂ.ಡಿ. ಸಿದ್ದಿಕಿ, ಸುಜೀತಕುಮಾರ ಕೋಟೆ, ಅಭಿಷೇಕ್ ಕೋಟೆ, ವಿಶ್ವನಾಥ ಗಾಯಕವಾಡ ಇತರರಿದ್ದರು.