ಕೆ.ಕೆ. ಟೈಗರ್ಸ್ ಬ್ರಿಗೇಡ್ ಜಿಲ್ಲಾ ಅಧ್ಯಕ್ಷರಾಗಿ ರಾಮಕೃಷ್ಣ

Ramkrishna Hulsoore (1)
Published on

ಬೀದರ್: ಕೆ.ಕೆ. ಟೈಗರ್ಸ್ ಬ್ರಿಗೇಡ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ರಾಮಕೃಷ್ಣ ಹುಲಸೂರೆ ಅವರನ್ನು ನೇಮಕ ಮಾಡಲಾಗಿದೆ.

ಬ್ರಿಗೇಡ್ ರಾಜ್ಯ ಅಧ್ಯಕ್ಷ ಸತೀಶಕುಮಾರ ಸೂಗುರ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ರಾಮಕೃಷ್ಣ ಭಾಲ್ಕಿ ತಾಲ್ಲೂಕಿನ ನೆಲವಾಡ ಎಂ. ಗ್ರಾಮದವರಾಗಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

ಬ್ರಿಗೇಡ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ರಾಮಕೃಷ್ಣ ಅವರನ್ನು ನೇಮಕ ಮಾಡಿದ್ದಕ್ಕೆ ನಾಗಪ್ಪ ಬಡಿಗೇರ, ಅನಿಲಕುಮಾರ ದುಬಲಗುಂಡೆ, ಸುನೀಲ್ ಕೆ. ದೊಡ್ಡಿ, ಕಲ್ಲಪ್ಪ ಹುಮನಾಬಾದೆ ಹಾಗೂ ನಾಗೇಶ ಸ್ವಾಮಿ ಮಸ್ಕಲ್ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net