

ಬೀದರ್: ವಿಶ್ವ ಹಿಂದು ಪರಿಷತ್ನಿಂದ ಶಾರದೀಯ ನವರಾತ್ರಿ ಮಹೋತ್ಸವ ನಿಮಿತ್ತ ಜೆಸ್ಕಾಂ (ಕೆಇಬಿ) ಕಚೇರಿ ಹತ್ತಿರದ ಹನುಮಾನ ಮಂದಿರದಲ್ಲಿ ಮಹಾಚಂಡಿ ಯಾಗ ಸೇರಿ ಇತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಲೋಕ ಕಲ್ಯಾಣ, ಆರೋಗ್ಯ, ಆಯುಷ್ಯ, ಲಕ್ಷ್ಮೀಪ್ರಾಪ್ತಿ, ಶತ್ರುನಾಶ ಹಾಗೂ ಸೌಭಾಗ್ಯ ವೃದ್ಧಿಗಾಗಿ ಸಂಕಲ್ಪ ಹಾಗೂ ಮಹಾಯಾಗ, ಮಹಾಪೂರ್ಣಾಹುತಿ ನಡೆಯಿತು.
ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ, ಶ್ರೀ ಅಮೃತಪ್ಪ ಮುತ್ಯಾ, ವಿಎಚ್ಪಿ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ, ಜಿಲ್ಲಾ ಮಠ-ಮಂದಿರ ಪ್ರಧಾನ ಪ್ರಮುಖ ರೋಹಿತ್ ಗುರೂಜಿ, ಪ್ರಮುಖರಾದ ರಾಜೇಶ್ವರಿ ಖ್ಯಾಮಾ, ಭೀಮಣ್ಣ ಸೋರಳ್ಳಿ, ಬೀರಪ್ಪ ಹಿಪ್ಪಳಗಾಂವ, ಸಂಗಮೇಶ ಪಾಟೀಲ್ ಇತರರಿದ್ದರು.