ಮನ್ನಾಎಖೇಳ್ಳಿಯಲ್ಲಿ ಒಬ್ಬನ ಕೊಲೆ

Ganpati Vaijinath
Published on

ಚಿಟಗುಪ್ಪ: ಮನ್ನಾಎಖೇಳ್ಳಿ ಜೆಸ್ಕಾಂ ಕಚೇರಿ ಹತ್ತಿರ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಒಬ್ಬನ ಕೊಲೆ ಮಾಡಲಾಗಿದೆ.

ಗಣಪತಿ ವೈಜಿನಾಥ (35) ಕೊಲೆಯಾದವ. ಕೊಲೆ ಆರೋಪಿಗಳನ್ನು ಸಿಪಿಐ ಗುರು ಪಾಟೀಲ್, ಪಿಎಸ್ಐ ಮಹೇಂದ್ರಕುಮಾರ ನೇತೃತ್ವದ ತಂಡ ಆರೋಪಿಗಳನ್ನು ಗುರುವಾರ ಸಂಜೆ ಚಿಂಚೋಳಿ ತಾಲೂಕಿನ ಐನೋಳ್ಳಿಯಲ್ಲಿ ಬಂಧಿಸಿದೆ. ನಿಡವಂಚಿಯ ಭದ್ರು, ಮನ್ನಾಎಖೇಳ್ಳಿಯ ಸಚಿನ್ ಎಂಬುವರನ್ನು ಬಂಧಿಸಿದ್ದು, ಇತರರ ಬಂಧನಕ್ಕೆ ಜಾಲ ಬೀಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲಿಸಿದ್ದು, ಮನ್ನಾಎಖೇಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net