ಮೈಸೂರು ದಸರಾದಲ್ಲಿ ಬೀದರ್ ಗಾಯಕಿ ಸಂಗೀತ ಸುಧೆ

mysore
Published on

ಬೀದರ್: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಬೀದರ್ ನ ಖ್ಯಾತ ಗಾಯಕಿ, ಬಿದರಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ರೇಖಾ ಸೌದಿ ಅವರು ಭಕ್ತಿ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಸಾವಿರದ ಶರಣು, ಹಾಲಲ್ಲಾದರೂ ಹಾಕು, ಎಂಥ ಶ್ರೀಮಂಥನಂತಾನೋ, ಮಾನವ ಮೂಳೆ ಮಾಂಸದ ತಡಿಕೆ, ಶಂಭೋ ಸ್ವಯಂಭೋ ಸಂಭವ, ತೋರಾ ಮನ್ ದರ್ಪಣ್ ಕಹಲಾಯ- ಪತಾ ನಹಿ ಕಿಸ್ ರೂಪ್ ಮೇ ಆ ಕರ್, ಎಲ್ಲಿ ಕಾಣೆ, ಎಲ್ಲಿ ಕಾಣೆ... ಗೀತೆಗಳನ್ನು ಹಾಡಿದರು.

ರೇಖಾ ಸೌದಿ ಅವರೊಟ್ಟಿಗೆ ಲಕ್ಷ್ಮೀ ಸೌದಿ, ಮಧುಶ್ರೀ, ವೈಷ್ಣವಿ ಕೊಪ್ಪ ಸಹ ಗಾಯಕರಾಗಿ, ಮಧುಸೂಧನ್ ತಬಲ, ವಸಂತ ಕುಂಬ್ಳೆ ಕೀಬೋಡ್೯, ಪೂರ್ಣಪ್ರಸಾದ ಬುಲ್ ಬುಲ್ ತರಂಗ ಹಾಗೂ ಗುರುದತ್ತ ರಿಥಂ ಪ್ಯಾಡ್ ಸಾಥ್ ನೀಡಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ವೇದಿಕೆಯಲ್ಲಿ ಗಾಯಕಿ ರೇಖಾ ಹಾಗೂ ತಂಡದವರಿಗೆ ಸನ್ಮಾನಿಸಿದರು. ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್ ಸುಬ್ರಹ್ಮಣ್ಯ, ಸಾಂಸ್ಕೃತಿಕ ಉಪ ಸಮಿತಿ ಅಧ್ಯಕ್ಷ ಕೆ.ವಿ. ಮಲ್ಲೇಶ, ಕ್ಯಾತನಹಳ್ಳಿ ಎಚ್. ಪ್ರಕಾಶ, ಬಿ.ಜೆ. ವಿಜಯಕುಮಾರ, ಶಿವಪ್ರಸಾದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net