

ಬೀದರ್: ಬೆಂಗಳೂರಿನಲ್ಲಿ ಆ. 5 ರಂದು ನಡೆಯಲಿರುವ ಬಸವ ಸಂಸ್ಕøತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯಿಂದ ಬಸವಾನುಯಾಯಿಗಳು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬೀದರ್ ಬಸವ ಸಂಸ್ಕøತಿ ಅಭಿಯಾನದ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದ್ದಾರೆ.
ವಿಶೇಷ ರೈಲು, ಬಸ್, ಖಾಸಗಿ ವಾಹನ ಹಾಗೂ ಸ್ವಂತ ವಾಹನಗಳಲ್ಲಿ ಬಸವಾನುಯಾಯಿಗಳು ರಾಜ್ಯದ ರಾಜಧಾನಿಗೆ ತೆರಳಲಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ರೈಲು ಅ. 4 ರಂದು ಮಧ್ಯಾಹ್ನ 2.40ಕ್ಕೆ ಬೀದರ್‍ನಿಂದ ಹೊರಟು ಅ. 5 ರಂದು ನಸುಕಿನ ಜಾವ 5ಕ್ಕೆ ಬೆಂಗಳೂರು ತಲುಪಲಿದೆ. ಅ. 5 ರಂದು ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಹೊರಟು ಅ. 6 ರಂದು ಮಧ್ಯಾಹ್ನ 2.40ಕ್ಕೆ ಬೀದರ್‍ಗೆ ಬರಲಿದೆ ಎಂದು ತಿಳಿಸಿದ್ದಾರೆ.
ಸಮಾರಂಭ ಜರುಗಲಿರುವ ಬೆಂಗಳೂರಿನ ಅರಮನೆ ಮೈದಾನದ ಗೇಟ್ ಸಂಖ್ಯೆ 4 ರಲ್ಲಿ ಇರುವ ಗಾಯತ್ರಿ ವಿಹಾರದಲ್ಲಿ ಈಗಾಗಲೇ ಸಮಾರಂಭಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಸಮಾರಂಭದಲ್ಲಿ ಪಾಲ್ಗೊಳ್ಳುವವರಿಗೆ ಉಪಾಹಾರ ಹಾಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸಮಾರಂಭದಲ್ಲಿ ನಾಡಿನ ಮಠಾಧೀಶರು, ಜನಪ್ರತಿನಿಧಿಗಳು, ಗಣ್ಯರು, ಬಸವ ಪರ ಸಂಘಟನೆಗಳ ಪ್ರಮುಖರು ಭಾಗವಹಿಸಲಿದ್ದಾರೆ. ಬಸವಣ್ಣನವರನ್ನು ಸಾಂಸ್ಕøತಿಕ ನಾಯಕರನ್ನಾಗಿ ಘೋಷಿಸಿದ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಸವ ಸಂಸ್ಕøತಿ ನಮ್ಮೆಲ್ಲರ ಅಸ್ಮಿತೆಯಾಗಿದೆ. ಅದನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಬಸವ ಭಕ್ತ ಹಾಗೂ ಲಿಂಗವಂತನ ಕರ್ತವ್ಯವಾಗಿದೆ. ರಾಜ್ಯದಾದ್ಯಂತ ಬಸವ ಸಂಸ್ಕøತಿ ಅಭಿಯಾನ ಅತ್ಯಂತ ಯಶಸ್ವಿಯಾಗಿ ಜರುಗಿದೆ. ಬೆಂಗಳೂರಿನ ಸಮಾರೋಪದಲ್ಲಿ ಪ್ರತಿಯೊಬ್ಬ ಬಸವಾನುಯಾಯಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು, ಯಶಸ್ವಿಗೊಳಿಸಿ ರಾಷ್ಟ್ರಕ್ಕೆ ಒಳ್ಳೆಯ ಸಂದೇಶ ಕೊಡಬೇಕು ಎಂದು ಮನವಿ ಮಾಡಿದ್ದಾರೆ.