ಕಾಂಗ್ರೆಸ್ ಎಸ್.ಸಿ. ವಿಭಾಗಕ್ಕೆ ನೇಮಕ

Congress Appointment-Chandrakant Wajure
Published on

ಬೀದರ್: ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನಗರದ ನಾವದಗೇರಿಯ ಚಂದ್ರಕಾಂತ ಪಾಂಡುರಂಗ ವಜುರೆ ಅವರನ್ನು ನೇಮಕ ಮಾಡಲಾಗಿದೆ.

ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಮತ್ತು ವಿಭಾಗದ ರಾಜ್ಯ ಅಧ್ಯಕ್ಷ ಆರ್. ಧರ್ಮಸೇನಾ ಅವರ ನಿರ್ದೇಶನದ ಮೇರೆಗೆ ಈ ನೇಮಕ ಮಾಡಲಾಗಿದೆ ಎಂದು ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಸಂಜುಕುಮಾರ ಡಿ. ಕುರನಳ್ಳಿಕರ್ ತಿಳಿಸಿದ್ದಾರೆ.

ನೇಮಕಾತಿ ಪತ್ರ ವಿತರಣೆ: ನಗರದಲ್ಲಿ ಸಚಿವ ರಹೀಂಖಾನ್ ಅವರು ಚಂದ್ರಕಾಂತ ವಜುರೆ ಅವರಿಗೆ ನೇಮಕಾತಿ ಪತ್ರ ವಿತರಿಸಿದರು.

ಬೀದರ್ ಮಹಾನಗರ ಪಾಲಿಕೆ ಅಧ್ಯಕ್ಷ ಮುಹಮ್ಮದ್ ಗೌಸ್, ಕಾಂಗ್ರೆಸ್ ಕಿಸಾನ್ ವಿಭಾಗದ ರಾಷ್ಟ್ರೀಯ ಜಂಟಿ ಸಂಯೋಜಕ ಜಾನಸನ್ ಘೋಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net