ಬಸವ ದಳಕ್ಕೆ ವೀರಶೆಟ್ಟಿ ಪಾಟೀಲ ನೇಮಕ

Veershetty Patil Markal - Copy
Published on

ಬೀದರ್: ರಾಷ್ಟ್ರೀಯ ಬಸವ ದಳದ ಬೀದರ್ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ವೀರಶೆಟ್ಟಿ ಪಾಟೀಲ ಮರಕಲ್ ಅವರನ್ನು ನೇಮಕ ಮಾಡಲಾಗಿದೆ.

ಬಸವಕಲ್ಯಾಣದಲ್ಲಿ ನಡೆದ 24ನೇ ಕಲ್ಯಾಣ ಪರ್ವದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಸಿದ್ಧರಾಮೇಶ್ವರ ಸ್ವಾಮೀಜಿ ಈ ನೇಮಕ ಮಾಡಿದರು.

ಬಸವ ದಳದ ರಾಜ್ಯ ಅಧ್ಯಕ್ಷ ಕೆ. ವೀರೇಶ ಅವರು ವೀರಶೆಟ್ಟಿ ಪಾಟೀಲ ಅವರಿಗೆ ಷಟ್‍ಸ್ಥಲ ಧ್ವಜ ನೀಡಿ ಸ್ವಾಗತಿಸಿದರು.

ಬಸವಕುಮಾರ ಸ್ವಾಮಿ, ಮಾತೆ ಲಾವಣ್ಯ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ, ಮುಖಂಡರಾದ ಶಿವರಾಜ ನರಶೆಟ್ಟಿ, ರಾಜೇಂದ್ರಕುಮಾರ ಗಂದಗೆ, ಕಂಟೆಪ್ಪ ಗಂದಿಗುಡಿ, ಗಣೇಶ ಬಿರಾದಾರ, ಜಗದೀಶ್ ಪಾಟೀಲ, ಸಂಗಮೇಶ ಜವಾದಿ, ಅರವಿಂದ ಧುಮ್ಮನಸೂರೆ, ವಿಲಾಸ್ ಪಾಟೀಲ ಹಕ್ಯಾಳ್, ಶಿವಶರಣಪ್ಪ ವಲ್ಲೇಪುರೆ, ರವೀಂದ್ರ ಕೊಳಕೂರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net