

ಬೀದರ್: ವಿಶ್ವ ಹಿಂದು ಪರಿಷತ್ ವತಿಯಿಂದ ಶಾರದೀಯ ನವರಾತ್ರಿ ಮಹೋತ್ಸವ ನಿಮಿತ್ತ ಭಾನುವಾರ (ಸೆ.28) ಬೆಳಗ್ಗೆ ಇಲ್ಲಿನ ಜೆಸ್ಕಾಂ (ಕೆಇಬಿ) ಕಚೇರಿ ಹತ್ತಿರದ ಹನುಮಾನ ಮಂದಿರದಲ್ಲಿ ಮಹಾಚಂಡಿ ಯಾಗ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪರಿಷತ್ ನ ಜಿಲ್ಲಾ ಮಠ-ಮಂದಿರ ಪ್ರಧಾನ ಪ್ರಮುಖ ರೋಹಿತ್ ಗುರೂಜಿ ತಿಳಿಸಿದ್ದಾರೆ.
ಬೆಳಗ್ಗೆ 8ಕ್ಕೆ ಸಂಕಲ್ಪ ಹಾಗೂ ಮಹಾಯಾಗ, ಮಧ್ಯಾಹ್ನ 12.30ಕ್ಕೆ ಮಹಾಪೂರ್ಣಾಹುತಿ ಇದೆ. ಲೋಕ ಕಲ್ಯಾಣ, ಆರೋಗ್ಯ, ಆಯುಷ್ಯ, ಲಕ್ಷ್ಮೀಪ್ರಾಪ್ತಿ, ಶತ್ರುನಾಶ ಹಾಗೂ ಸೌಭಾಗ್ಯ ವೃದ್ಧಿಗಾಗಿ ಯಾಗ ಆಯೋಜಿಸಲಾಗಿದೆ. ಪರಿಷತ್ನ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.