ಡೆವಲೆಪ್‍ಮೆಂಟ್ ಸೊಸೈಟಿಗೆ ರೂ. 11.80 ಲಕ್ಷ ಲಾಭ

Development Credit Co Operative Society GB Meeting
Published on

ಬೀದರ್: ಡೆವಲೆಪ್‍ಮೆಂಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ 2024-25ನೇ ಸಾಲಿನಲ್ಲಿ ಸಾಲ ನೀಡಿಕೆ ಹಾಗೂ ಇತರ ವ್ಯವಹಾರಗಳಿಂದ ಒಟ್ಟು ರೂ. 11.80 ಲಕ್ಷ ಲಾಭ ಬಂದಿದೆ ಎಂದು ಸೊಸೈಟಿ ಅಧ್ಯಕ್ಷ ಶಿವಕುಮಾರ ಶೆಟಕಾರ್ ಹೇಳಿದರು.

ನಗರದ ಸೊಸೈಟಿ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದಸ್ಯರಿಗೆ ಶೇ 10 ರಷ್ಟು ಲಾಭಾಂಶ ಕೊಡಲಾಗುವುದು ಎಂದು ತಿಳಿಸಿದರು.

ಸಂಘಕ್ಕೆ 702 ಸದಸ್ಯರು ಇದ್ದಾರೆ. ರೂ. 43.93 ಲಕ್ಷ ಷೇರು ಬಂಡವಾಳ ಇದೆ. ರೂ. 4.11 ಕೋಟಿ ಸಾಲ ವಿತರಿಸಿದ್ದು, ರೂ. 1.90 ಕೋಟಿ ಹೂಡಿಕೆ ಮಾಡಲಾಗಿದೆ. ಠೇವಣಿ ಮೊತ್ತ ರೂ. 5.08 ಕೋಟಿ ಹಾಗೂ ವಹಿವಾಟು 9.20 ಕೋಟಿ ಆಗಿದೆ ಎಂದು ಹೇಳಿದರು.

ಸಂಘದಿಂದ ವಾಹನ ಸಾಲ, ಅಸ್ತಿ ಆಧಾರ ಸಾಲ, ಬಂಗಾರ ಆಭರಣ ಸಾಲ ಹಾಗೂ ವೇತನ ಆಧಾರಿತ ಸಾಲ ನೀಡಲಾಗುತ್ತಿದೆ. ಸದಸ್ಯರು ಇದರ ಸದುಪಯೋಗ ಪಡೆಯಬೇಕು ಎಂದು ಆಡಳಿತ ಮಂಡಳಿ ಸದಸ್ಯೆ ಪೂರ್ಣಿಮಾ ಜಾರ್ಜ್ ತಿಳಿಸಿದರು.

ಉತ್ತಮ ಗ್ರಾಹಕರಾದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯೆ ಸುನೀತಾ ಸ್ವಾಮಿ, ರಾಜಶೇಖರ ತಂಬಾಕೆ ಹಾಗೂ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.

ಅಗಲಿದ ಸದಸ್ಯ ನಂದಕುಮಾರ ಸಂತಪುರಕರ್ ಹಾಗೂ ಗಣ್ಯರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನ ಆಚರಿಸಲಾಯಿತು.

ಆಡಳಿತ ಮಂಡಳಿ ನಿರ್ದೇಶಕರಾದ ವಿಜಯಕುಮಾರ ಜೈನ್, ಸಂಜುಕುಮಾರ, ವೇಣುಗೋಪಾಲ್, ಶರಣಬಸಪ್ಪ, ಸದಸ್ಯರಾದ ಪಿ. ನಾರಾಯಣ್, ರವಿ ಹಾಲಹಳ್ಳಿ, ರವೀಂದ್ರನಾಥ  ಕೊರಲ್ಲಿ, ದಯಾನಂದ ಸ್ವಾಮಿ,  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಕಾಶ್ ಸ್ವಾಮಿ ಇದ್ದರು.

ರವೀಂದ್ರ ಮೂಲಗೆ ಸ್ವಾಗತಿಸಿದರು. ಸಂಘದ ಆಡಳಿತ ಮಂಡಳಿ ಸದಸ್ಯೆ ಮಂಜುಳಾ ಮೂಲಗೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net