ಧರ್ಮ ನಮೂದು ಗೊಂದಲ ಪರಿಹರಿಸಿ

Dr Ashokkumar Nagure 1
Published on

ಬೀದರ್: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಏನನ್ನು ಬರೆಸಬೇಕು ಎನ್ನುವ ಕುರಿತು ಲಿಂಗಾಯತ/ವೀರಶೈವ ಲಿಂಗಾಯತ ಸಮಾಜದವರಲ್ಲಿ ಗೊಂದಲ ಮೂಡಿದೆ ಎಂದು ಬಸವೇಶ್ವರ ಕಾಲೊನಿ ವೆಲ್‍ಫೇರ್ ಅಸೋಸಿಯೇಷನ್ ಅಧ್ಯಕ್ಷ ಡಾ. ಅಶೋಕಕುಮಾರ ನಾಗೂರೆ ಹೇಳಿದ್ದಾರೆ.

ಸಮಾಜದ ಮಠಾಧೀಶರು, ಗಣ್ಯರು ಹಾಗೂ ಸಂಘಟನೆಗಳ ಪ್ರಮುಖರು ಬೇರೆ ಬೇರೆ ರೀತಿ ಹೇಳಿಕೆ ಕೊಡುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ವೀರಶೈವ, ವೀರಶೈವ ಲಿಂಗಾಯತ ಮತ್ತು ಹಿಂದೂ ಬರೆಸುವಂತೆ ಅನೇಕರು ಕರೆ ಕೊಟ್ಟಿದ್ದಾರೆ. ಈ ಮಧ್ಯೆ ಲಿಂಗ ಧರಿಸುವವರು ಲಿಂಗವಂತರೆಂದು ಬರೆಸಬೇಕೆಂಬ ಚರ್ಚೆಯೂ ನಡೆಯುತ್ತಿದೆ. ಹೀಗಾಗಿ ಯಾವುದನ್ನು ಬರೆಸುವುದು ಸೂಕ್ತವೆಂಬ ಗೊಂದಲ ಸಮಾಜದವರಲ್ಲಿ ಆವರಿಸಿದೆ ಎಂದು ತಿಳಿಸಿದ್ದಾರೆ.

ಸಮಾಜದ ಎಲ್ಲ ಮಠಾಧೀಶರು, ಗಣ್ಯರು ಹಾಗೂ ಸಂಘ ಸಂಸ್ಥೆಯವರು ಸಭೆ ನಡೆಸಿ ಸಮೀಕ್ಷೆಯಲ್ಲಿ ಏನು ಬರೆಸಬೇಕು ಎಂಬ ಸ್ಪಷ್ಟ ಸಂದೇಶ ಕೊಟ್ಟು, ಗೊಂದಲ ನಿವಾರಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net