

ಬೀದರ್: ಈಡಿಗ ಸಮಾಜದವರು ಸೆ. 22 ರಿಂದ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ಈಡಿಗ ಎಂದೇ ಬರೆಸಬೇಕು ಎಂದು ಆರ್ಯ ಈಡಿಗ ಸಮಾಜದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗಯ್ಯ ಸುಲ್ತಾನಪುರ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಈಡಿಗ ಸಮಾಜವನ್ನು ತೆಲಂಗ್, ಇಳಿಗ, ಭಂಡಾರಿ, ಗುತ್ತಿದಾರ್, ಗೌಡ್ಸ್ ಎಂದು ಕೂಡ ಗುರುತಿಸಲಾಗುತ್ತದೆ. ಆದರೆ, ಈಡಿಗ ಹೊರತುಪಡಿಸಿ ಬೇರೆ ನಮೂದಿಸಿದರೆ ಸಮಾಜದ ನಿರ್ದಿಷ್ಟ ಸಂಖ್ಯೆ ತಿಳಿಯುವುದಿಲ್ಲ ಎಂದು ಹೇಳಿದ್ದಾರೆ.
ಎಲ್ಲರೂ ಧರ್ಮದ ಕಾಲಂನಲ್ಲಿ ಹಿಂದೂ ಮತ್ತು ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ಈಡಿಗ ಎಂದು ನಮೂದಿಸಬೇಕು ಎಂದು ತಿಳಿಸಿದ್ದಾರೆ.