ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

thankushnoor Manikrao Patil Polytechnic
Published on

ಬೀದರ್: ಕಮಲನಗರ ತಾಲ್ಲೂಕಿನ ಠಾಣಾಕುಶನೂರದ ಶ್ರೀ ಮಾಣಿಕರಾವ್ ಪಾಟೀಲ ರೂರಲ್ ಪಾಲಿಟೆಕ್ನಿಕ್‍ನಲ್ಲಿ ಬುಧವಾರ ಕಲ್ಯಾಣ ಕರ್ನಾಟಕ ಉತ್ಸವ ದಿನ ಸಂಭ್ರಮದಿಂದ ಆಚರಿಸಲಾಯಿತು.

ಪ್ರಾಚಾರ್ಯ ರಾಜಶೇಖರ ಮುದ್ದಾ ರಾಷ್ಟ್ರ ಧ್ವಜಾರೋಹಣ  ನೆರವೇರಿಸಿದರು.

ಎನ್.ಎಸ್.ಎಸ್. ಅಧಿಕಾರಿ ಸಂಗಮೇಶ ಆಣದೂರೆ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ ಸೀಗಿ, ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಸಂಜಯ್ ಭೋಸ್ಲೆ, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ರೇವಣಪ್ಪ ವಾಕಡೆ, ಸಿವಿಲ್ ವಿಭಾಗದ ಮುಖ್ಯಸ್ಥ ಸೂರ್ಯಕಾಂತ ಮೇತ್ರೆ, ಹಿರಿಯ ಉಪನ್ಯಾಸಕರಾದ ಸಿದ್ರಾಮಪ್ಪ ಮೂಲಿಮನಿ, ಸುನೀಲ್ ಮಡಿವಾಳ, ಸುನೀಲಕುಮಾರ ಕರಂಜೆ, ವಿಶ್ವನಾಥ ಕಾನಕುರ್ತೆ, ವಿಶ್ವನಾಥ ಶಾಸ್ತ್ರಿ, ಅಂತೇಶ್ವರ ವಡ್ಲೆ, ಸಚಿನ್ ಬಳತೆ, ಜಯೇಂದ್ರ ಪಡಸಾಲೆ, ಬಸವರಾಜ ವಾಲೆ ಮತ್ತಿತರರು ಇದ್ದರು.

ಪಾಲಿಟೆಕ್ನಿಕ್ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net