ಎಸಿಇ ಕಚೇರಿಯಲ್ಲಿ ಇಂಜಿನಿಯರ್ ದಿನಾಚರಣೆ

Engineers Day Programme- ACE
Published on

ಬೀದರ್: ಇಲ್ಲಿಯ ಹಳ್ಳದಕೇರಿಯ ಸ್ವರ್ಣನಂದನ ಲೇಔಟ್‍ನಲ್ಲಿ ಇರುವ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ (ಎಸಿಇ) ಕಚೇರಿಯಲ್ಲಿ ಸೋಮವಾರ ಇಂಜಿನಿಯರ್ ದಿನ ಆಚರಿಸಲಾಯಿತು.

ಅಸೋಸಿಯೇಷನ್ ಅಧ್ಯಕ್ಷ ಅನಿಲ್ ಔರಾದೆ ಅವರು ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸಿದರು.

ಕ್ರೆಡಾಯ್ ಬೀದರ್ ಅಧ್ಯಕ್ಷ ರವಿ ಮೂಲಗೆ, ಅಸೋಸಿಯೇಷನ್ ಉಪಾಧ್ಯಕ್ಷ ಅನಿಲಕುಮಾರ ಖೇಣಿ, ಕಾರ್ಯದರ್ಶಿ ಮನೋಹರ ದಿಕ್ಷಿತ್, ಜಂಟಿ ಕಾರ್ಯದರ್ಶಿ ಶರಣಬಸವೇಶ್ವರ ಎಖ್ಖೆಳ್ಳಿಕರ್, ಖಜಾಂಚಿ ಮಾಧವ್ ಜೋಶಿ, ಪ್ರಮುಖರಾದ ಶ್ರೀನಿವಾಸ್ ಸಾಳೆ, ಅಂಬಾದಾಸ್ ಕುಲಕರ್ಣಿ, ಅಶೋಕ ಭೋಸ್ಲೆ, ಅಶೋಕ ಪಾಟೀಲ, ಪ್ರಶಾಂತ ಶೇಂದ್ರೆ, ಪ್ರಾಣೇಶ್ ನಂದಿಕೋಲ್, ವಸಂತ ಕುಲಕರ್ಣಿ ಎಂಜಿನಿಯರ್‍ಗಳಾದ ರಾಕೇಶ ಪಾಟೀಲ, ವಿಜಯಕುಮಾರ ಕೆ., ಕಾರ್ಮಿಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net