ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು

kp school
Published on

ಬೀದರ್: ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳ ಉಜ್ವಲ ಭವಿಷ್ಯ ರೂಪಿಸುತ್ತಿರುವ ಶಿಕ್ಷಕರ ಸೇವೆ ಶ್ಲಾಘನೀಯ ಎಂದು ಕನ್ಯಕಾ ಪರಮೇಶ್ವರಿ (ಕೆಪಿ) ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಾಬು ವಾಲಿ ಹೇಳಿದರು.

ಹೂಗೇರಿ ಬಡಾವಣೆಯ ಕೆಪಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಭವಿಷ್ಯದ ವಿಚಾರದಲ್ಲಿ ಯಾವುದೇ ರಾಜಿಯಾಗದೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

ಆಧುನೀಕರಣದ ಪ್ರಭಾವದಿಂದಾಗಿ ವಚನ ಸಾಹಿತ್ಯ, ಜಾನಪದ, ಕಲೆ, ಸಂಸ್ಕೃತಿ ನಶಿಸುವ ಹಂತ ತಲುಪಿವೆ. ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳಿಗೆ ಪಠ್ಯದ ಜತೆ ಮಾನವೀಯ ಮೌಲ್ಯಗಳನ್ನೂ ತಿಳಿಸಿಕೊಡಬೇಕು ಎಂದರು.

ಪ್ರೌಢ ಶಾಲೆ ಮುಖ್ಯಗುರು ವಿಜಯಕುಮಾರ ಪಾಟೀಲ್, ಶಿಕ್ಷಕರಾದ ಕಸ್ತೂರಿ, ಅನಿತಾ, ಮಹಾಲಕ್ಷ್ಮೀ, ವರ್ಷಾರಾಣಿ, ನಾಮದೇವ ಶರ್ಮಾ ಇತರರಿದ್ದರು. ಭಾಗ್ಯಶ್ರೀ ಸ್ವಾಗತಿಸಿದರು. ರಾಧಿಕಾ ನಿರೂಪಣೆ ಮಾಡಿದರು. ಹಾರಿಕಾ ವಂದಿಸಿದರು. ಸಂಸ್ಥೆಯಿಂದ ಎಲ್ಲ ಶಿಕ್ಷಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net