

ಬೀದರ್: ತಾಲೂಕಿನ ಜನವಾಡ ಬಳಿಯ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್ಎಸ್ಎಸ್ಕೆ)ಯ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ್ ತಿಳಿಸಿದ್ದಾರೆ.
ಚುನಾವಣೆಗೆ ನಿಮಿತ್ತ ಪಕ್ಷದಿಂದ ಚುನಾವಣಾ ನಿರ್ವಹಣಾ ಸಮಿತಿ ರಚಿಸಲಾಗಿದ್ದು, ಸಂಚಾಲಕರಾಗಿ ಗುರುನಾಥ ಜ್ಯಾಂತಿಕರ್ , ಸದಸ್ಯರಾಗಿ ಶಿವಾನಂದ ಮಂಠಾಳಕರ್, ಈಶ್ವರಸಿಂಗ್ ಠಾಕೂರ್, ವಸಂತ ಬಿರಾದಾರ್, ರಾಜರಡ್ಡಿ ಶಾಬಾದ್, ಅಶೋಕ ಪಾಟೀಲ್ ಮೇಹಕರ್, ಅಶೋಕ ವಕಾರೆ ಬೇಲೂರು ಅವರನ್ನು ನಿಯುಕ್ತಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.