

ಬೀದರ್: ಬೀದರ್ ಬೆಟರ್‍ಮೆಂಟ್ ಫೌಂಡೇಷನ್‍ನಿಂದ ಹೊರ ತರಲಾದ ತುರ್ತು ನೆರವಿನ ಸಂಖ್ಯೆಗಳ ಸ್ಟಿಕ್ಕರ್ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ನಗರದಲ್ಲಿ ಗುರುವಾರ ಬಿಡುಗಡೆ ಮಾಡಿದರು.
ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ನೆರವಾಗುವ ದಿಸೆಯಲ್ಲಿ ಫೌಂಡೇಷನ್ ತುರ್ತು ಸಂಖ್ಯೆಗಳ ಸ್ಟಿಕ್ಕರ್ ಹೊರ ತಂದಿರುವುದು ಪ್ರಶಂಸನೀಯ ಎಂದು ಅವರು ಹೇಳಿದರು.
ಫೌಂಡೇಷನ್‍ನಿಂದ ಮನೆ ಮನೆಗಳಲ್ಲಿ ಅಂಟಿಸಲು ತುರ್ತು ನೆರವಿನ ಸಂಖ್ಯೆಗಳ ಒಟ್ಟು 10 ಸಾವಿರ ಸ್ಟಿಕ್ಕರ್‍ಗಳನ್ನು ವಿತರಿಸಲಾಗುತ್ತಿದೆ ಎಂದು ಫೌಂಡೇಷನ್ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ತಿಳಿಸಿದರು.
ಸ್ಟಿಕ್ಕರ್ ಪೊಲೀಸ್ ಠಾಣೆಗಳು, ಆಸ್ಪತ್ರೆ, ಆಂಬುಲನ್ಸ್, ಮಹಿಳಾ ಸಹಾಯವಾಣಿ, ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮ, ಜೆಸ್ಕಾಂ, ಏರ್‍ಪೋರ್ಟ್, ಮಹಾನಗರ ಪಾಲಿಕೆ ಸೇರಿದಂತೆ ಮಹತ್ವದ ದೂರವಾಣಿ ಸಂಖ್ಯೆಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ತುರ್ತು ಸಂಖ್ಯೆಗಳು ಕಳ್ಳತನ, ಅಪಘಾತ, ಅನಾರೋಗ್ಯ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಸಹಕಾರಿಯಾಗಲಿವೆ. ಕಾರಣ, ಸಾರ್ವಜನಿಕರು ಮನೆಯ ಗೋಡೆ, ಬಾಗಿಲು ಮತ್ತಿತರ ಗಮನ ಸೆಳೆಯುವ ಸ್ಥಳಗಳಲ್ಲಿ ಸ್ಟಿಕ್ಕರ್‍ಗಳನ್ನು ಅಂಟಿಸಬೇಕು ಎಂದು ಕೋರಿದರು.
ಫೌಂಡೇಷನ್‍ನ ಡಾ. ಮಕ್ಸೂದ್ ಚಂದಾ, ಮುಹಮ್ಮದ್ ರಫಿಕ್ ಅಹಮ್ಮದ್, ಮುಹಮ್ಮದ್ ಹುಸೇನಿ, ಮುಕ್ತಾರ್ ಅಹಮ್ಮದ್, ಹಾಮೇದ್ ಖಾದ್ರಿ, ತಾಹ ಕಲೀಮುಲ್ಲಾ ಇದ್ದರು. ಇದೇ ವೇಳೆ ಬೀದರ್ ಬೆಟರ್‍ಮೆಂಟ್ ಫೌಂಡೇಷನ್ ವತಿಯಿಂದ ಕೈಗೊಳ್ಳಲಾದ ವಿವಿಧ ಸಾಮಾಜಿಕ
ಕಾರ್ಯಗಳ ಸಂಕ್ಷಿಪ್ತ ವರದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಸಲ್ಲಿಸಲಾಯಿತು.