ಬೀದರ್: ವಿನ್ನರ್ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ವತಿಯಿಂದ ಶಿಕ್ಷಕರ ಅರ್ಹತಾ ಪರೀಕ್ಷೆ ಹಾಗೂ ಮಾದರಿ ಪರೀಕ್ಷೆ ಕುರಿತು ನಗರದ ಹೊಸ ಬಸ್ ನಿಲ್ದಾಣ ಸಮೀಪದ ಶ್ರೀ ಸ್ವಾಮಿ ನರೇಂದ್ರ ಪದವಿಪೂರ್ವ ಕಾಲೇಜಿನಲ್ಲಿ ಸೆ. 14 ರಂದು ಬೆಳಿಗ್ಗೆ 10.30ಕ್ಕೆ ಉಚಿತ ವಿಶೇಷ ಕಾರ್ಯಾಗಾರ ಹಾಗೂ ಮಾದರಿ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ.
ಖ್ಯಾತ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ಮಾಡಲಿದ್ದಾರೆ. ಪರೀಕ್ಷೆ ಬರೆಯಲಿರುವ ಜಿಲ್ಲೆಯ ಅಭ್ಯರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆಯಬೇಕು ಎಂದು ಕೇಂದ್ರದ ನಿರ್ದೇಶಕಿ ಪೂಜಾ ಹನುಮಂತರಾವ್ ಪಾಟೀಲ ಮನವಿ ಮಾಡಿದ್ದಾರೆ.