ಕಾಲುವೆಯಲ್ಲಿ ಕೊಚ್ಚಿಹೋದ ಯುವಕ

harish
Published on

ಭಾಲ್ಕಿ: ತಾಲೂಕಿನ ಹುಣಜಿ(ಕೆ) ಹತ್ತಿರ ತುಂಬಿ ಹರಿಯುತ್ತಿರುವ ಕಾರಂಜಾ ಕಾಲುವೆ ಪ್ರವಾಹಕ್ಕೆ ಸಿಲುಕಿ ಬಾಲಕನೊಬ್ಬ ಕೊಚ್ಚಿಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

ಹುಣಜಿ(ಕೆ) ಗ್ರಾಮದ ಹರೀಶ್ ರಾಜಕುಮಾರ ಮಾನಕರ್ (16) ಮೃತ ದುರ್ದೈವಿ. ಹರೀಶ್ ಮನೆಯಿಂದ ಹೊಲಕ್ಕೆ ಹೋಗಿದ್ದ. ರಾತ್ರಿಯಾದರೂ ಮನೆಗೆ ಬರಲಿಲ್ಲ. ಎಲ್ಲೆಡೆ ಹುಡುಕಾಡಿದರೂ ಮಾಹಿತಿ ಸಿಗಲಿಲ್ಲ. ಆತಂಕಗೊಂಡ ಪಾಲಕರು ಧನ್ನೂರ ಠಾಣೆಗೆ ದೂರು ನೀಡಿದ್ದರು. ಈ ಮಧ್ಯೆ ಬುಧವಾರ ಶವ ಕಾಲುವೆಯಲ್ಲಿ ಪತ್ತೆಯಾಗಿದೆ. ಹೊಲದ ಹತ್ತಿರ ಕಾಲುವೆಯಿದೆ. ಕೈಕಾಲು ತೊಳೆದುಕೊಳ್ಳುವುದಕ್ಕಾಗಿ ಕಾಲುವೆ ಬಳಿ ಹೋದಾಗ ಆಯತಪ್ಪಿ ಒಳಗೆ ಬಿದ್ದು ನೀರಿನ ರಭಸದಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಶಂಕೆ ವ್ಯಕ್ತವಾಗಿದೆ. ಧನ್ನೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net