ಶಾಸಕ ಚವ್ಹಾಣ್ ಗೆ ಹಣದ ಬೇಡಿಕೆ

Prabhu Chavan
Published on

ಬೀದರ್: ಮಾಜಿ ಸಚಿವ, ಔರಾದ್ ಶಾಸಕ ಪ್ರಭು ಚವ್ಹಾಣ್ ಅವರ ಮೊಬೈಲ್ ಸಂಖ್ಯೆ ವ್ಯಾಟ್ಸಪ್ ಗೆ ಅಪರಿಚಿತ ವ್ಯಕ್ತಿ ಅಶ್ಲೀಲ ವಿಡಿಯೋ, ಚಿತ್ರ ಕಳುಹಿಸಿ 30 ಸಾವಿರ ರೂ. ಬೇಡಿಕೆ ಇಟ್ಟಿದ್ದು ಬೆಳಕಿಗೆ ಬಂದಿದೆ. ಹಣ ನೀಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕುವೆ ಎಂದು ಶಾಸಕರಿಗೆ ಬೆದರಿಕೆ ಹಾಕಿದ್ದಾನೆ. ಶಾಸಕರ ಸಂಬಂಧಿ ಮುರಳಿಧರ ಪ್ರಕಾಶ ಪವಾರ್ ನೀಡಿರುವ ದೂರಿನ ಮೇಲೆ ಹೊಕ್ರಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net