

ಬೀದರ್: ವಾಯಾ ಉಜ್ಜಯಿನಿ ಪೀಠ (ವಿಜಯನಗರ ಜಿಲ್ಲೆ) ಮೂಲಕ ಬೀದರ್-ದಾವಣಗೆರೆ ಹಾಗೂ ದಾವಣಗೆರೆ-ಬೀದರ್ ನಡುವೆ ನೂತನ ರಾಜಹಂಸ ಬಸ್ ಸಂಚಾರಕ್ಕೆ ನಗರದಲ್ಲಿ ಚಾಲನೆ ನೀಡಲಾಯಿತು.
ದಾವಣಗೆರೆಯಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ ಚಾಲನೆ ನೀಡಿದರೆ, ನಗರದ ನಿಲ್ದಾಣದಲ್ಲಿ ಜ್ಞಾನ ಶಿವಯೋಗಾಶ್ರಮದ ಶ್ರೀ ರಾಜಶೇಖರ ಶಿವಾಚಾರ್ಯ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬಸ್ ಡಿಪೋ ವ್ಯವಸ್ಥಾಪಕ ಬೀರಪ್ಪ, ಕಂಟ್ರೋಲರ್ ರಾಜಕುಮಾರ, ಗಂಗಾಧರ ಸ್ವಾಮಿ ಧನ್ನೂರ, ಕಂಟೆಪ್ಪ ಭಂಗೂರೆ, ಮಹೇಶ ಪಾಟೀಲ್, ಕುಶಾಲರಾವ ಯಾಬಾ, ಪ್ರವೀಣ ಸ್ವಾಮಿ, ಶ್ರೀಕಾಂತ ಸ್ವಾಮಿ, ಹರ್ಷವರ್ಧನ ಪಾಟೀಲ್ ಇತರರಿದ್ದರು. ಈ ಬಸ್ ನಿತ್ಯ ದಾವಣಗೆರೆ ನಿಲ್ದಾಣದಿಂದ ಸಂಜೆ 5ಕ್ಕೆ ಹೊರಟು ಉಜ್ಜಯಿನಿ ಮೂಲಕ ಮರುದಿನ ಬೆಳಗ್ಗೆ 7.30ಕ್ಕೆ ಬೀದರ್ ತಲುಪಲಿದೆ. ಬೀದರ್ ನಿಂದ ಸಂಜೆ 4.15ಕ್ಕೆ ಹೊರಟು ಉಜ್ಜಯಿನಿ ಮೂಲಕ ಮರುದಿನ ಬೆಳಗ್ಗೆ 7.10ಕ್ಕೆ ದಾವಣಗೆರೆ ತಲುಪಲಿದೆ. ಪ್ರಯಾಣ ದರ 834 ರೂ. ಇದೆ.