ವಿಶ್ವ ಹಿಂದು ಪರಿಷತ್ ಗೆ ಸಂಗು ಪಾಟೀಲ್ ನೇಮಕ

Sangu
Published on

ಬೀದರ್: ವಿಶ್ವ ಹಿಂದು ಪರಿಷತ್ ನ ಬಜರಂಗದಳ ಬೀದರ್ ನಗರ ಸಂಯೋಜಕರಾಗಿ ಸಂಗಮೇಶ ಪಾಟೀಲ್ (ಸಂಗು) ಅವರನ್ನು ನೇಮಕ ಮಾಡಲಾಗಿದೆ. ಪರಿಷತ್ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಅಧ್ಯಕ್ಷತೆ, ವಿಭಾಗ ಸಹ ಕಾರ್ಯದರ್ಶಿ ಉಮಾಕಾಂತ ಮೇತ್ರೆ ನೇತೃತ್ವದಲ್ಲಿ ಇತ್ತೀಚೆಗೆ ನಗರದಲ್ಲಿ ನಡೆದ ಸಭೆಯಲ್ಲಿ ನೇಮಕ ಮಾಡಲಾಗಿದೆ. ತಕ್ಷಣ ಜವಾಬ್ದಾರಿ ವಹಿಸಿಕೊಂಡು ನಗರ ಪ್ರದೇಶದಲ್ಲಿ ಪರಿಷತ್ ಬಲವರ್ಧನೆಗೆ ಶ್ರಮಿಸಬೇಕು ಎಂದು ತಿಳಿಸಿದ್ದಾರೆ. ಜಿಲ್ಲಾ ಕಾರ್ಯಧ್ಯಕ್ಷ ಸಂಗಮೇಶ ಗಾದಾಗಿ, ಬಜರಂಗ ದಳ ಜಿಲ್ಲಾ ಸಂಯೋಜಕ ಭೀಮಣ್ಣ ಸೊರಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net