ಬೆಂಗಳೂರು ಸಮಾರಂಭದ ಹೊಣೆ ಬಸವರಾಜ ಧನ್ನೂರಗೆ

Dhannur Sanman - Copy
Published on

ಬೀದರ್: ಬೀದರ್ ನಲ್ಲಿ ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಿ ಸಂಘಟಿಸಿದ ಅಭಿಯಾನ ಸಮಿತಿಯ ಅಧ್ಯಕ್ಷರೂ ಆದ ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಅವರಿಗೆ ಬೆಂಗಳೂರಿನಲ್ಲಿ ಅ. 5 ರಂದು ನಡೆಯಲಿರುವ ಅಭಿಯಾನದ ಸಮಾರೋಪ ಸಮಾರಂಭದ ಹೊಣೆ ಕೊಡಲಾಗಿದೆ.

ನಗರದಲ್ಲಿ ಈಚೆಗೆ ನಡೆದ ಬಸವ ಸಂಸ್ಕೃತಿ ಅಭಿಯಾನ ಪ್ರಧಾನ ಸಮಾರಂಭದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಗೌರವಾಧ್ಯಕ್ಷ, ಗದಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹಾಗೂ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಈ ಘೋಷಣೆ ಮಾಡಿದರು.

ಅಭಿಯಾನವನ್ನು ಅಭೂತಪೂರ್ವ, ಐತಿಹಾಸಿಕ ಹಾಗೂ ಮಾದರಿಯಾಗಿ ಆಯೋಜಿಸಿದ್ದಕ್ಕೆ ಬಸವರಾಜ ಧನ್ನೂರ ದಂಪತಿಯನ್ನು ನಾಡಿನ ಪೂಜ್ಯರು ್ಲ ಶಾಲು ಹೊದಿಸಿ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net