

ಬೀದರ್: ಭಾಲ್ಕಿ ತಾಲ್ಲೂಕಿನ ಬಾಜೋಳಗಾ ಸಮೀಪದ ಓಂಕಾರ ಸಕ್ಕರೆ ಕಾರ್ಖಾನೆ (ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆ)ಯಲ್ಲಿ ಉದಕ ಶಾಂತಿ ಹಾಗೂ ಯಂತ್ರೋಪಕರಣ ಪೂಜೆ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ಖಾನೆಯ ಅಧ್ಯಕ್ಷ ಬಾಬುರಾವ್ ಬೊತ್ರೆ ಪಾಟೀಲ ಹಾಗೂ ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರೂ ಆದ ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಅವರು ಜಂಟಿಯಾಗಿ ಪೂಜೆ ನೆರವೇರಿಸಿದರು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಬಾಬುರಾವ್ ಬೊತ್ರೆ ಪಾಟೀಲ ಹಾಗೂ ಪ್ರಕಾಶ್ ಖಂಡ್ರೆ ಅವರು ರೈತರು 2025-26ನೇ ಹಂಗಾಮಿಗೆ ಕಾರ್ಖಾನೆಗೆ ಕಬ್ಬು ಪೂರೈಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಲಾತೂರಿನ ಮಾಜಿ ಸಂಸದೆ ರೂಪಾತಾಯಿ ಪಾಟೀಲ, ನಿಲಂಗಾದ ಮಾಜಿ ಶಾಸಕ ಸಂಭಾಜಿರಾವ್ ಪಾಟೀಲ ನೀಲಂಗೆಕರ್, ಯುವ ಮುಖಂಡ ಪ್ರಸನ್ನ ಖಂಡ್ರೆ, ಉಸ್ಮಾನಾಬಾದ್ ಜನತಾ ಸಹಕಾರಿ ಬ್ಯಾಂಕ್‍ನ ವಸಂತರಾವ್ ನಾಗದೆ ಪಾಟೀಲ, ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಾದ ಮಹಾವೀರ ಘೋಡ್ಕೆ, ಕಾಶಿನಾಥ ಕಾಡಾದೆ ಮತ್ತಿತರರು ಇದ್ದರು.