

ಬೀದರ್: ಭಾಲ್ಕಿ ತಾಲ್ಲೂಕಿನ ಖಾನಾಪುರದ ಮಲ್ಲಣ್ಣ ದೇವಸ್ಥಾನದಲ್ಲಿ ಎಂಟು ದಿನಗಳ ರುದ್ರ ಸ್ವಹಕಾರ ಯಜ್ಞ ಮಹೋತ್ಸವ ಗುರುವಾರ ಸಮಾರೋಪಗೊಂಡಿತು.
ದೇಗುಲದಲ್ಲಿ ಭಕ್ತ ಸಮೂಹದ ಮಧ್ಯೆ ರುದ್ರ ಸ್ವಹಕಾರ ತಜ್ಞ, ಪೂರ್ಣಾಹುತಿ, ವೇದ ಪಂಡಿತರಿಂದ ದೇವರಿಗೆ ಸತತ ಧಾರ ರುದ್ರಾಭಿಷೇಕ ಪೂಜೆ, ತೀರ್ಥ, ಪ್ರಸಾದ ವಿತರಣೆ ಮತ್ತಿತರ ಕಾರ್ಯಕ್ರಮಗಳು ಶ್ರದ್ಧೆ, ಭಕ್ತಿಯಿಂದ ನೆರವೇರಿದವು.
ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ ಮೇತ್ರೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾವ್ ಕುಲಕರ್ಣಿ, ವ್ಯವಸ್ಥಾಪಕ ಸಂಜೀವಕುಮಾರ ಸುಂದಾಳ್, ಪ್ರಮುಖರಾದ ಮಾಣಿಕರಾವ್ ಪಾಟೀಲ ಮಳಚಾಪುರ, ಅರ್ಚಕರಾದ ಬಸಪ್ಪ ಹಿರಿವಗ್ಗೆ, ಮಲ್ಲಿಕಾರ್ಜುನ ಹಿರಿವಗ್ಗೆ, ಪ್ರಕಾಶ್ ಹಿರಿವಗ್ಗೆ, ಬೀರಪ್ಪ, ಪಂಡಿತ ಪೂಜಾರಿ, ಆಕಾಶ್ ಹಿರಿವಗ್ಗೆ ಮತ್ತಿತರರು ಇದ್ದರು.