ಜನ ಮನ ತಣಿಸಿದ ಸಂಗೀತ ರಸ ಸಂಜೆ

Rangmandir - Copy
Published on

ಬೀದರ್: ಕಾಡವಾದದ ಜೀವನ ಪ್ರಕಾಶ ಕಲ್ಚರಲ್ ಆ್ಯಂಡ್ ವೆಲ್‍ಫೇರ್ ಸೋಸೈಟಿಯು ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಹಮ್ ಏಕ್ ಹೈ ಘೋಷವಾಕ್ಯದಡಿ ಸೋಮವಾರ ಆಯೋಜಿಸಿದ್ದ ಸಂಗೀತ ರಸ ಸಂಜೆ ಜನ ಮನ ರಂಜಿಸಿತು.

ಕಲಾವಿದರು ಸುಮಧುರವಾಗಿ ಹಾಡಿದ ದೇಶ ಭಕ್ತಿ ಗೀತೆಗಳು ನೆರೆದವರಲ್ಲಿ ದೇಶಾಭಿಮಾನ ಉಕ್ಕಿಸಿದವು. ನೃತ್ಯ ಪ್ರದರ್ಶನ ಪುಳಕಿತಗೊಳಿಸಿತು.

ಖ್ಯಾತ ಕಲಾವಿದರಾದ ಜಸ್ಸಿ ಸೋನವನೆ, ಪೀಟರ್ ಮಾಳಗೆ, ಮಹೇಶ್ವರಿ ಪಾಂಚಾಳ, ರೇಖಾ ಅಪ್ಪಾರಾವ್ ಸೌದಿ, ಪ್ರವೀಣ್ ಜಾನ್, ಇಮ್ಯಾನುವೆಲ್ ಗಾದಗಿ, ರೇಣುಕಾ ಎನ್.ಬಿ., ಮಹೇಶಕುಮಾರ ಕುಂಬಾರ, ನೇಹಾ ರಾಜು, ದಿವ್ಯ ದಿಲೀಪ್, ಭಾಗ್ಯಶ್ರೀ, ಮಾನಸ ಪಾಂಚಾಳ, ಪ್ರವೀಣ ಮ್ಯೂಸಿಕ್ ಅಕಾಡೆಮಿ ಕಲಾವಿದರು ಸೇರಿದಂತೆ ಅನೇಕ ಕಲಾವಿದರು ದೇಶ ಭಕ್ತಿ ಗೀತೆಗಳನ್ನು ಹಾಡಿದರು.

ಸೋಲಾಪುರದ ಸ್ಟಾರ್ಸ್ ಆಫ್ ಮೆಲೋಡೀಸ್‍ನ ಡಾ. ಜಬ್ಬಾರ್ ಮುರ್ಷದ್, ಧನಂಜಯ್ ಅವರಿಂದ ನೇರ ವಾದ್ಯಗೋಷ್ಠಿ ಜರುಗಿತು.

ನಾಟ್ಯಶ್ರೀ ನೃತ್ಯಾಲಯ, ಕೃಷ್ಣ ಡ್ಯಾನ್ಸ್ ಅಕಾಡೆಮಿ, ಜಿಲ್ಲಾ ಬಾಲ ಭವನ ಮಕ್ಕಳ ಸಮಿತಿ, ಸಪ್ತಗಿರಿ ಕಾಲೇಜು, ಸಂಸ್ಕಾರ ಇಂಟರ್‍ನ್ಯಾಷನಲ್ ಶಾಲೆಯ ಮಕ್ಕಳು ಆಕರ್ಷಕ ನೃತ್ಯ ಪ್ರದರ್ಶಿಸಿದರು. ಏಕವ್ಯಕ್ತಿ ಗಾಯನ ಸ್ಪರ್ಧೆಯೂ ನಡೆಯಿತು. 30 ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.

ಕಲಾವಿದರಿಗೆ ವೇದಿಕೆ ಒದಗಿಸಲು ಹಾಗೂ ಜನರಲ್ಲಿ ದೇಶ ಭಕ್ತಿ ಜಾಗೃತಿಗೊಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ದಿಲೀಪ್ ಕಾಡವಾದ ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಎಸ್ತೇರ್ ದಿಲೀಪ್ ಕಾಡವಾದ ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣ ಕರ್ನಾಟಕ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಮಣಗೇರೆ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎಂ. ಮಚ್ಚೆ, ಗ್ರಾಮ ಪಂಚಾಯಿತಿ ಸದಸ್ಯೆ ನಿಂಗಮ್ಮ ನಾಗಪ್ಪ, ಹಿರಿಯ ಕಲಾವಿದರಾದ ರಾಜೇಂದ್ರಸಿಂಗ್ ಪವಾರ್, ಶಂಭುಲಿಂಗ ವಾಲ್ದೊಡ್ಡಿ, ಪುಂಡಲೀಕರಾವ್ ಪಾಟೀಲ ಗುಮ್ಮಾ, ಮಾರುತಿ ಚಾಂಬೋಳ್, ರಾಣಿ ಸತ್ಯಮೂರ್ತಿ, ರಮೇಶ ಕೊಳಾರ, ಮಲ್ಲಿಕಾರ್ಜುನ ನಾಗಮಾರಪಳ್ಳಿ, ಶಿವಕುಮಾರ ಪಾಂಚಾಳ, ಪ್ರವೀಣಕುಮಾರ ಜಾನ್, ನಾಗರಾಜ ಜೋಗಿ, ಸೈಮನ್ ಸೂರ್ಯವಂಶಿ, ಸ್ವಾಮಿದಾಸ್ ನಾಗೂರೆ, ಪಾಂಡಪ್ಪ ಮೇತ್ರೆ, ರಾಜಕುಮಾರ ಲದ್ದೆ, ಸೂರ್ಯಕಾಂತ ಮೋರೆ, ದಾವಿದ್, ಸಾಗರ್, ಜಾನ್ಸನ್, ಆಗಸ್ಟಿನ್, ಯಶವಂತ, ಸುರೇಶ ಇದ್ದರು.

ದೇವಿದಾಸ ಜೋಶಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net