ದಸರಾ ದರ್ಬಾರ್ ಗೆ ತೀವ್ರ ವಿರೋಧ

Basavaraj Patil Haroorgeri
Published on

ಬೀದರ್: ಬಸವಕಲ್ಯಾಣದಲ್ಲಿ ನಡೆಸಲು ನಿರ್ಧರಿಸಿರುವ ರಂಭಾಪುರಿ ಶ್ರೀಗಳ ದಸರಾ ದರ್ಬಾರ್ ಗೆ ಜಿಲ್ಲಾ ಲಿಂಗಾಯತ ಬ್ರಿಗೇಡ್ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಜಗತ್ತಿಗೆ ಮಾನವೀಯ ಮೌಲ್ಯ ಕೊಟ್ಟ ಹಾಗೂ ಸರ್ವ ಸಮಾನತೆ ಸಾರಿದ ಬಸವಾದಿ ಶರಣರ ಪುಣ್ಯ ಭೂಮಿಯಲ್ಲಿ ಮನುಷ್ಯರ ಹೆಗಲ ಮೇಲೆ ಅಡ್ಡ ಪಲ್ಲಕ್ಕಿ ನಡೆಸುವುದನ್ನು ಬಸವ ಭಕ್ತರು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬಸವಣ್ಣನವರ ಸಂಸ್ಕೃತಿಗೆವಿರುದ್ಧವಾದ ದಸರಾ ದರ್ಬಾರ್ ಅನ್ನು ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ಬಸವ ಭಕ್ತರ ತೀವ್ರ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ದಸರಾ ದರ್ಬಾರ್ ವಿರುದ್ಧ ಬಸವಕಲ್ಯಾಣದ ಬಿ.ಕೆ.ಡಿ.ಬಿ. ಕಲ್ಯಾಣ ಮಂಟಪದಲ್ಲಿ ಆಗಸ್ಟ್ 17 ರಂದು ಬೆಳಿಗ್ಗೆ 11ಕ್ಕೆ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ  ಹಮ್ಮಿಕೊಳ್ಳಲಾದ ಸಭೆಯಲ್ಲಿ ಬಸವ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net