ಜನಸೇವಾ ಶಾಲೆ: ಕೃಷ್ಣ ಜನ್ಮಾಷ್ಟಮಿ ವಿಶಿಷ್ಟ ಆಚರಣೆ

Janseva School - Copy
Published on

ಬೀದರ್: ಇಲ್ಲಿಯ ಪ್ರತಾಪನಗರದ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಶನಿವಾರ ವಿಶಿಷ್ಟವಾಗಿ ಆಚರಿಸಲಾಯಿತು.

ಗೋ ಪೂಜೆಯೊಂದಿಗೆ ಕೃಷ್ಣ ಜನ್ಮಾಷ್ಟಮಿಗೆ ಚಾಲನೆ ನೀಡಲಾಯಿತು. ಬಳಿಕ ಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮಾತೆಯರು ಶ್ರದ್ಧೆ, ಭಕ್ತಿಯಿಂದ ಕೃಷ್ಣನ ತೊಟ್ಟಿಲು ನೆರವೇರಿಸಿದರು.

ಮಕ್ಕಳು, ಮಾತೆಯರು, ಶಿಕ್ಷಕಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಗಾಯನ, ನೃತ್ಯ, ಕೋಲಾಟ, ಭಜನೆ ಮೊದಲಾದವು ಸಭಿಕರ ಮನ ರಂಜಿಸಿದವು.

200ಕ್ಕೂ ಹೆಚ್ಚು ಮಕ್ಕಳು ಕೃಷ್ಣ-ರಾಧೆಯರ ವೇಷ ಧರಿಸಿ ಗಮನ ಸೆಳೆದರು. ಕೃಷ್ಣನ ವೇಷಧಾರಿ ಮಕ್ಕಳು ಭಗವದ್ಗೀತೆ ಶ್ಲೋಕ ಪಠಿಸಿದರು. ಬೆಣ್ಣೆ ಸವಿದು ಸಂಭ್ರಮಿಸಿದರು. ಪ್ರೌಢಶಾಲೆಯ ಮಕ್ಕಳು ಮೊಸರು ಗಡಿಗೆ ಒಡೆದು ಆನಂದಿಸಿದರು.

ಚಿಂತಕ ಬಸವರಾಜ ಅಷ್ಟಗಿ ಕೃಷ್ಣನ ಲೀಲೆ ಕುರಿತು ಉಪನ್ಯಾಸ ನೀಡಿದರು. ಜನಸೇವಾ ಪ್ರತಿಷ್ಠಾನದ ಆಡಳಿತಾಧಿಕಾರಿ ಸೌಭಾಗ್ಯವತಿ ನೇತೃತ್ವ ವಹಿಸಿದ್ದರು.

ಜನಸೇವಾ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸ್ವಾಮಿ, ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ, ಖಜಾಂಚಿ ಶಿವರಾಜ ಹುಡೇದ್, ಸದಸ್ಯರಾದ ಬಿ.ಎಸ್. ಕುದುರೆ, ಶಿವಲಿಂಗಪ್ಪ ಜಲಾದೆ, ಪ್ರೌಢಶಾಲೆ ಮುಖ್ಯಶಿಕ್ಷಕ ರಾಹುಲ್ ಮೇಟೆಕರ್, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ನೀಲಮ್ಮ ಚಾಮರೆಡ್ಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net