

ಬೀದರ್: ರಾಜ್ಯ ಸರ್ಕಾರ ನೋಂದಾಯಿತ ಕಟ್ಟಡ ಹಾಗೂ ಇತರ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಬಿದ್ರಿ ಜಿಲ್ಲಾ ಕರ್ನಾಟಕ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ತಾನಾಜಿ ಸಗರ್ ಒತ್ತಾಯಿಸಿದ್ದಾರೆ.
ಇಂದಿನ ಬೆಲೆ ಏರಿಕೆಯ ದಿನಮಾನಗಳಲ್ಲಿ ಕಟ್ಟಡ ಹಾಗೂ ಇತರ ಕಾರ್ಮಿಕರಿಗೆ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಅಂತಹದ್ದರಲ್ಲಿ ಮಕ್ಕಳ ಓದಿನ ಖರ್ಚು ನಿಭಾಯಿಸುವುದು ಆಗದಂತಹ ಪರಿಸ್ಥಿತಿ ಇದೆ ಎಂದು ತಿಳಿಸಿದ್ದಾರೆ.
ಸರ್ಕಾರ ಸ್ನಾತಕೋತ್ತರ ಪದವಿ ವರೆಗೆ ಉಚಿತ ಶಿಕ್ಷಣ ಕಲ್ಪಿಸಿ ಕಾರ್ಮಿಕರ ಮಕ್ಕಳ ಹಿತ ರಕ್ಷಿಸಬೇಕು. ಸದ್ಯದ ಶಿಷ್ಯವೇತನ ಮೊತ್ತ ಹೆಚ್ಚಿಸಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.