

ಬೀದರ್: ಚರ್ಚ್‍ಗಳ ಅಭಿವೃದ್ಧಿ ಸೇರಿದಂತೆ ಕ್ರೈಸ್ತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಗೀರದಾರ್ ಹೇಳಿದರು.
ಇಂಡಿಯನ್ ಕ್ರಿಶ್ಚಿಯನ್ ಪಾಸ್ಟರ್ಸ್ ಫೆಲೋಶಿಪ್ ಅಸೋಸಿಯೇಷನ್ ವತಿಯಿಂದ ಇಲ್ಲಿಯ ಟಿಡಿಬಿ ಕಾಲೊನಿಯ ನ್ಯೂ ಹೋಪ್ ಗೋಸ್ಪಲ್ ಚರ್ಚ್‍ನಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಚರ್ಚ್‍ಗಳ ನವೀಕರಣ, ಸುತ್ತುಗೋಡೆ ನಿರ್ಮಾಣಕ್ಕೆ ಅನುದಾನ ದೊರಕಿಸಿಕೊಡಲಾಗುವುದು. ಪಾಸ್ಟರ್‍ಗಳ ಗೌರವ ಧನ ಬೇಡಿಕೆ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ದೇಶ ಹಾಗೂ ರಾಜ್ಯಕ್ಕೆ ಕ್ರೈಸ್ತ ಸಮುದಾಯದ ಕೊಡುಗೆ ಅಪಾರವಾಗಿದೆ. ಸಮುದಾಯದ ಅಭಿವೃದ್ಧಿಗೆ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಹೇಳಿದರು.
ಪಾಸ್ಟರ್‍ಗಳಾದ ಸಾವನ್ ಪೌಲ್, ಮನೋಹರ, ರಾಜು, ನೋಹಾ, ಅಬ್ರಾಹಂ, ಥಾಮ್ಸನ್, ವಿಜಯಕುಮಾರ, ಫಿಲಿಪ್, ಜೋಸೆಫ್, ರಜನಿ, ವಿಲ್ಸನ್, ಎಂ.ಡಿ. ಸ್ಯಾಮುವೆಲ್, ಮಲಾಕಿ, ಆ್ಯಂಟೋನಿ, ಬಿ.ಕೆ. ಪ್ರವೀಣ್, ಬೀದರ್ ದಕ್ಷಿಣ ಜಿಲ್ಲಾ ಲೇ ನಾಯಕ ಜೀವನ್ ಜಾಗೀರದಾರ್, ಪ್ರಮುಖರಾದ ಜಾಕೋಬ್ ಮುಸ್ತಾಪುರಕರ್, ಯೇಸುದಾಸ ಆಣದೂರೆ, ಪ್ರವೀಣ್ ಕಮಠಾಣ, ಸಂಜಯ್ ಪೌಲ್, ಸಾವನ್ ಪೌಲ್, ಪ್ರಕಾಶ್ ಮತ್ತಿತರರು ಇದ್ದರು.