ದ್ವಿಚಕ್ರ ವಾಹನ ಮೆಕ್ಯಾನಿಕ್‍ಗಳ ಸಮ್ಮೇಳನ 17ಕ್ಕೆ

Vilas Bakka
Published on

ಬೀದರ್: ಭಾಲ್ಕಿ ಪಟ್ಟಣದ ಪುರ ಭವನದಲ್ಲಿ ಆಗಸ್ಟ್ 17 ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಮಟ್ಟದ ದ್ವಿಚಕ್ರ ವಾಹನ ಮೆಕ್ಯಾನಿಕ್‍ಗಳ ಸಮ್ಮೇಳನ ನಡೆಯಲಿದೆ.

ಇಂಡಿಯನ್ ಟೂ ವ್ಹೀಲರ್ಸ್ ಆ್ಯಂಡ್ ಆಟೊಮೊಬೈಲ್ ವೆಲ್‍ಫೇರ್ ಟ್ರಸ್ಟ್ ಹಾಗೂ ಭಾಲ್ಕಿ ತಪೋವನ ಆಟೋ ಸೆಂಟರ್ ವತಿಯಿಂದ ಸಮ್ಮೇಳನ ಸಂಘಟಿಸಲಾಗಿದೆ.

ಸಂಸದ ಸಾಗರ್ ಖಂಡ್ರೆ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಲಿದ್ದಾರೆ ಎಂದು ಇಂಡಿಯನ್ ಟೂ ವ್ಹೀಲರ್ಸ್ ಆ್ಯಂಡ್ ಆಟೊಮೊಬೈಲ್ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ವಿಲಾಸ್ ಬಕ್ಕಾ ತಿಳಿಸಿದ್ದಾರೆ.

ಔರಂಗಾಬಾದ್‍ನ ಪ್ರೇರಣಾತ್ಮಕ ಭಾಷಣಕಾರ ಲಕ್ಷ್ಮಿಕಾಂತ ನಾಂದೇಡಕರ್ ಮುಖ್ಯ ಭಾಷಣ ಮಾಡಲಿದ್ದಾರೆ. ಡಿವೈಎಸ್‍ಪಿ ಪವಾಡಶೆಟ್ಟಿ ಹಾಗೂ ತಾಲ್ಲೂಕು ಕಾರ್ಮಿಕ ಅಧಿಕಾರಿ ಮಂಜುನಾಥ ಕೆ.  ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಆಟೊಮೊಬೈಲ್, ಆಯಿಲ್ ಹಾಗೂ ಬ್ಯಾಟರಿ ಸೇರಿದಂತೆ 15 ರಿಂದ 20 ಕಂಪನಿಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಮೆಕ್ಯಾನಿಕ್‍ಗಳು ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net