ಕೇತಕಿಗೆ ಭಕ್ತರ ಪಾದಯಾತ್ರೆ

dinada chitra - Copy
Published on

ಬೀದರ್: ಶ್ರಾವಣ ಮಾಸ ನಿಮಿತ್ತ ಇಲ್ಲಿನ ನೂರಾರು ಭಕ್ತರು ಭಾನುವಾರ ನೆರೆಯ ಜಹೀರಾಬಾದ್ ತಾಲೂಕಿನ ಕೇತಕಿಯ ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡರು.

ಇಲ್ಲಿನ ಕೆಇಬಿ ಹನುಮಾನ ಮಂದಿರದಿಂದ ಆರಂಭವಾದ ಯಾತ್ರೆ ಜಹೀರಾಬಾದ್ ಮೂಲಕ ಕೇತಕಿಗೆ ಸಂಜೆ ಭಕ್ತರು ತೆರಳಿದರು. ಅಲ್ಲಿ ರಾತ್ರಿ ವಾಸ್ತವ್ಯ ಮಾಡಿ, ಸೋಮವಾರ ಬೆಳಗ್ಗೆ ಪೂಜೆ ಸಲ್ಲಿಸಲಿದ್ದಾರೆ.

ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ, ಪ್ರಮುಖರಾದ ವೀರಶೆಟ್ಟಿ ಬಳತೆ, ಹಣಮಂತ ಹಿಪ್ಪಳಗಾಂವ, ಈರಪ್ಪ ಹಿಪ್ಪಳಗಾಂವ, ಚನ್ನಪ್ಪ, ಅನೀಲ, ಶಾಂತಕುಮಾರ, ಭದ್ರಪ್ಪ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net