ಪರಮಾತ್ಮನ ಆರಾಧನೆ ಮಾಡಿ

R-02
Published on

ಬೀದರ್: ಶ್ರಾವಣ ಮಾಸದಲ್ಲಿ ಪರಮಾತ್ಮನ ಆರಾಧನೆ, ಭಜನೆ, ಕೀರ್ತನೆ, ಪೂಜೆ, ಧ್ಯಾನ, ಜಪ-ತಪಗಳನ್ನು ಮಾಡುವುದರಿಂದ ಮನುಷ್ಯನಲ್ಲಿ ಅದ್ಭುತ ಶಕ್ತಿ ಜಾಗೃತವಾಗುತ್ತದೆ ಎಂದು ನೌಬಾದ್ನ ಜ್ಞಾನಶಿವಯೋಗಾಶ್ರಮದ ಅಧಿಪತಿ ಶ್ರೀ ಡಾ.ರಾಜಶೇಖರ ಶಿವಾಚಾರ್ಯ ಹೇಳಿದರು.

ನೆರೆಯ ಉದಗೀರ ಹತ್ತಿರದ ಶಿರೂರು ತಾಜಬನ್ನಲ್ಲಿಯ ಸ್ವಯಂಭು ಮಹಾದೇವ ಮಂದಿರದಲ್ಲಿ ಶ್ರಾವಣ ಮಾಸ ನಿಮಿತ್ತ ಆಯೋಜಿಸಿದ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಶಿವನ ಆರಾಧನೆಗೆ ಶ್ರಾವಣ ಮಾಸ ಉತ್ತಮ ಸಮಯ. ವಿವಿಧ ಪೂಜೆಗಳಂತೆ ಶಿವನಿಗೆ ಬಿಲ್ವಾರ್ಚನೆ ಅತ್ಯಂತ ಪ್ರಿಯವಾದ ಪೂಜೆ. ಶಿವಾರಾಧನೆಯಲ್ಲಿ ಬಿಲ್ವಾರ್ಚನೆಗೆ ಅತ್ಯಂತ ಮಹತ್ವವಿದೆ. ಲಕ್ಷ ಬಿಲ್ವಾರ್ಚನೆಯಿಂದ ಮೂರು ಜನ್ಮದ ಪಾಪ ಹೋಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

ಸುಲೋಚನಾ ಶಂಕ್ರೆಪ್ಪ ತೊಂಡಾರೆ, ಲತಾ ಸುರೇಶ, ಪ್ರೇಮಾ ಮಹೇಶ, ಸವಿತಾ ಜಗದೀಶ, ಸಮೀಕ್ಷಾ ರಾಮೇಶ್ವರ, ಸಂಗೀತಾ ಗಂಗಾಧರ ಘಾಳೆ, ಧನರಾಜ ಮಿಸಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net