ವಿಶ್ವ ಹಿಂದು ಪರಿಷತ್ ವತಿಯಿಂದ ಭವ್ಯ ರಕ್ಷಾ ಬಂಧನ ಹಬ್ಬ

VHP - Copy
Published on

ಬೀದರ್: ನಗರದ ವಡ್ಡರ ಕಾಲೋನಿಯಲ್ಲಿ ವಿಶ್ವ ಹಿಂದು ಪರಿಷತ್ ಬೀದರ್ ಜಿಲ್ಲಾ ಘಟಕದ ವತಿಯಿಂದ ರಕ್ಷಾ ಬಂಧನ ಹಬ್ಬವನ್ನು ಭವ್ಯವಾಗಿ ಆಚರಿಸಲಾಯಿತು. ಸಹೋದರ-ಸಹೋದರಿಯರ ಬಾಂಧವ್ಯವನ್ನು ಬಲಪಡಿಸುವ ಉದ್ದೇಶದಿಂದ ರಾಖಿ ಕಟ್ಟುವ ಮತ್ತು ಸಿಹಿತಿಂಡಿ ವಿತರಿಸುವ ಮೂಲಕ ಹಬ್ಬಕ್ಕೆ ಸಾಂಸ್ಕೃತಿಕ ಮೆರಗು ನೀಡಲಾಯಿತು.

ಕಾರ್ಯಕ್ರಮವನ್ನು ವಾರ್ಡ್ ನಂ. 25ರ ನಗರಸಭೆ ಸದಸ್ಯ ಶ್ರೀ ಶಶಿ ಹೊಸಳ್ಳಿ ಅವರು ಮಾತನಾಡಿ, “ರಕ್ಷಾ ಬಂಧನ ಹಬ್ಬವು ಸಮಾಜದಲ್ಲಿ ಪರಸ್ಪರ ವಿಶ್ವಾಸ ಮತ್ತು ಭದ್ರತೆಯ ಸಂಕೇತ” ಎಂದರು. ವಿಶ್ವ ಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ಕಲ್ಪನಾ ದೇಶಪಾಂಡೆ ತಮ್ಮ ಸಂದೇಶದಲ್ಲಿ, “ಹಬ್ಬಗಳು ಸಂಸ್ಕೃತಿ ಸಂರಕ್ಷಣೆಗೂ, ಹೊಸ ಪೀಳಿಗೆಗೆ ನೈತಿಕ ಪಾಠ ನೀಡುವುದಕ್ಕೂ ಮುಖ್ಯ” ಎಂದು ಹೇಳಿದರು.

ವಿಶ್ವ ಹಿಂದು ಪರಿಷತ್ ಜಿಲ್ಲಾ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ ಮಾತನಾಡಿ, “ವಿಶ್ವ ಹಿಂದು ಪರಿಷತ್ ದೇಶದ ಸಂಸ್ಕೃತಿ, ಪರಂಪರೆ ಮತ್ತು ಬಾಂಧವ್ಯವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿದೆ. ರಕ್ಷಾ ಬಂಧನ ಹಬ್ಬವು ಕೇವಲ ಕುಟುಂಬದ ಮಟ್ಟಿಗೆಯ ಹಬ್ಬವಲ್ಲ, ಇದು ಸಮಾಜದಲ್ಲಿ ಒಗ್ಗಟ್ಟಿನ ಸಂಕೇತವಾಗಿದೆ” ಎಂದು ಹೇಳಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಸಂಗಮೇಶ ಬೊಮ್ಮಶೆಟ್ಟಿ, ಪರಿಷತ್ ಮಠ ಮಂದಿರ ಪ್ರಮುಖ ಶ್ರೀ ರೋಹಿತ್ ಗೂರುಜಿ, ಇತಿಹಾಸ ಸಂಕಲ್ಪ ಸಮಿತಿ ಸದಸ್ಯೆ ರಾಜೇಶ್ವರಿ ಖ್ಯಾಮ್ಮಾ, ಸಾಮಾಜಿಕ ಕಾರ್ಯಕರ್ತೆ ಸಾಧನಾ, ಬಡಾವಣೆಯ ಹಿರಿಯರಾದ ರಾಮದಾಸ, ಶಾಮ, ಮಾರುತಿ, ರಾಜು ಲಾಲಪ್ಪ, ನಾಗೇಶ ಹಾಗೂ ಅನೇಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net