ಸಂಜಯ್ ಜಾಗೀರದಾರ್‍ಗೆ ಸತ್ಕಾರ

Sanjay Jagirdar Sanman
Published on

ಬೀದರ್: ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾಗಿ ನೇಮಕಗೊಂಡ ಪ್ರಯುಕ್ತ ಕಲಬುರಗಿಯ ಕೆಥೊಲಿಕ್ ಧರ್ಮ ಕ್ಷೇತ್ರದ ವತಿಯಿಂದ ಸಂಜಯ್ ಜಾಗೀರದಾರ್ ಅವರನ್ನು ನಗರದ ಸೇಂಟ್ ಜೋಸೆಫ್ ಶಾಲೆ ಸಭಾಂಗಣದಲ್ಲಿ ಶನಿವಾರ ಸತ್ಕರಿಸಲಾಯಿತು.

ಕಲಬುರಗಿ ಧರ್ಮಾಧ್ಯಕ್ಷ ಬಿಷಪ್ ರಾಬರ್ಟ್ ಮೈಕಲ್ ಮಿರಾಂಡಾ ಅವರು ಶಾಲು ಹೊದಿಸಿ ಗೌರವಿಸಿದರು.

ಫಾದರ್ ಸ್ಟ್ಯಾನಿ ಲೊಬೊ, ಫಾದರ್ ವಿಲ್ಸನ್, ಫಾದರ್ ಸಂತೋಷ್, ಫಾದರ್ ಕ್ಲೇರಿ, ಫಾದರ್ ಸಂತೋಷ್ ಬಾಪು, ಕೆಥೊಲಿಕ್ ಧರ್ಮ ಕ್ಷೇತ್ರದ ಸಭಾಪಾಲನಾ ಸಮಿತಿ ಸದಸ್ಯರು, ಕ್ರೈಸ್ತ ಸಮುದಾಯದ ಗಣ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net