ಬೀದರ್ ದಕ್ಷಿಣ ಕುಂದು ಕೊರತೆ ಆಲಿಕೆ ಕಚೇರಿ ಉದ್ಘಾಟನೆ

Jagirdar Office - Copy
Published on

ಬೀದರ್: ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿಯಲ್ಲಿ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಗೀರದಾರ್ ಅವರು ಬೀದರ್ ದಕ್ಷಿಣ ಕ್ಷೇತ್ರದ ಎಲ್ಲ ಸಮುದಾಯಗಳ ಕುಂದು ಕೊರತೆ ಆಲಿಕೆ ಕಚೇರಿಯನ್ನು ಆರಂಭಿಸಿದ್ದಾರೆ.

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರ ಕುಂದು ಕೊರತೆ ಆಲಿಸಿ, ಪರಿಹರಿಸಲು ಕಚೇರಿ ಆರಂಭಿಸಲಾಗಿದೆ ಎಂದು ಬುಧವಾರ ಕಚೇರಿಯನ್ನು ಉದ್ಘಾಟಿಸಿದ ಸಂಜಯ್ ಜಾಗೀರದಾರ್ ಹೇಳಿದರು.

ಕಚೇರಿಯಲ್ಲಿ ಕಂಪ್ಯೂಟರ್, ಸಿಬ್ಬಂದಿ ಇರಲಿದ್ದಾರೆ. ಏನೇ ಸಮಸ್ಯೆಗಳಿದ್ದರೂ ಕ್ಷೇತ್ರದ ಜನ ಕಚೇರಿಯನ್ನು ಅಥವಾ ನೇರವಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಕಚೇರಿ ಸಿಬ್ಬಂದಿ ವಿದ್ಯಾರ್ಥಿಗಳ ಶಿಷ್ಯವೇತನ, ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತಿತರ ಸರ್ಕಾರದ ವಿವಿಧ ಯೋಜನೆಗಳ ಅರ್ಜಿ ಸಲ್ಲಿಕೆಗೆ ನೆರವಾಗಲಿದ್ದಾರೆ. ಸರ್ಕಾರದ ಯೋಜನೆಗಳ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.

ಜನ ಜಾಗೃತರಾದರೆ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಸಾರ್ವಜನಿಕರು ಮೂಲಸೌಕರ್ಯ ಸೇರಿದಂತೆ ಯಾವುದೇ ಸಮಸ್ಯೆ ಗಮನಕ್ಕೆ ತಂದರೆ, ಬಗೆಹರಿಸಲು ಪ್ರಯತ್ನಿಸಲಾಗುವುದು. ಸಾರ್ವಜನಿಕರು ಕಚೇರಿಯ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ದಿಸೆಯಲ್ಲಿ ಜಾಗೀರದಾರ್ ಅವರು ಕಚೇರಿ ಆರಂಭಿಸಿರುವುದು ಉತ್ತಮ ಬೆಳವಣಿಗೆ ಎಂದು ಪ್ರಮುಖರಾದ ಶಿರೋಮಣಿ ಹೇಳಿದರು.

ಪ್ರಮುಖರಾದ ಪಾಸ್ಟರ್ ವಿಲ್ಸನ್, ಮೋಜಸ್, ಜೀವನ್ ಜಾಗೀರದಾರ್, ಜಾಕೋಬ್ ಮುಸ್ತಾಪುರಕರ್, ಥಾಮಸ್, ಜಡಸನ್, ಧನರಾಜ, ರಿಜಾಯಿಸ್, ಯೇಸುದಾಸ್, ಸುನೀಲ್ ಕೋಟೆ, ಮಹಾಂತೇಶ್, ಜೇಮ್ಸ್, ಯೋಹಾನ್, ವಿಜಯಕುಮಾರ ಹಳ್ಳಿಖೇಡ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net