ನೃತ್ಯ ಕಾರ್ಯಾಗಾರ ಆ. 3 ರಂದು

Jordon Yashswi
Published on

ಬೀದರ್: ನಗರದ ಮೋಹನ್ ಮಾರ್ಕೆಟ್‍ನಲ್ಲಿ ಇರುವ ಎ.ಕೆ. ಡ್ಯಾನ್ಸ್ ಸ್ಟುಡಿಯೊದಲ್ಲಿ ಆಗಸ್ಟ್ 3 ರಂದು ಬೆಳಿಗ್ಗೆ 11 ರಿಂದ ರಾತ್ರಿ 9 ರ ವರೆಗೆ ನೃತ್ಯ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಮುಂಬೈನ ಪ್ರಸಿದ್ಧ ನೃತ್ಯ ಪಟು ಜಾರ್ಡನ್ ಯಶಸ್ವಿ ಅವರು ನೃತ್ಯ ವಿವಿಧ ಪ್ರಕಾರಗಳನ್ನು ಹೇಳಿಕೊಡಲಿದ್ದಾರೆ ಎಂದು ಸ್ಟುಡಿಯೊ ಅಧ್ಯಕ್ಷ ಅಕ್ಷಯ ಶೀಲವಂತ ತಿಳಿಸಿದ್ದಾರೆ.

ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಇಂಡಿಯನ್ ಐಡಲ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಜಿಲ್ಲೆಯ ಯುವ ಕಲಾವಿದರು ಗಾಯನದ ಮೂಲಕ ತಮ್ಮ ಪ್ರತಿಭಾ ಪ್ರದರ್ಶನ ಮಾಡುತ್ತಿದ್ದಾರೆ. ನೃತ್ಯ ಕಲಾವಿದರಿಗೂ ವೇದಿಕೆ ಕಲ್ಪಿಸಿಕೊಡುವ ದಿಸೆಯಲ್ಲಿ ಮಾರ್ಗದರ್ಶನ ಮಾಡಲು ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ನೃತ್ಯ ಪಟುಗಳು ಕಾರ್ಯಾಗಾರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net