

ಬೀದರ್: ರಾಜ್ಯವನ್ನು ಭಿಕ್ಷಾಟನೆ ಮುಕ್ತಗೊಳಿಸುವ ರಾಜ್ಯ ಸರ್ಕಾರದ ಸಂಕಲ್ಪದ ಭಾಗವಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರೈಲ್ವೆ ಪೊಲೀಸರ ಸಹಯೋಗದೊಂದಿಗೆ ಇಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಲ್ಲಿ ಭಿಕ್ಷಾಟನೆ ಕುರಿತು ಜಾಗೃತಿ ಮೂಡಿಸಲಾಯಿತು.
ಕಾನೂನು ಪ್ರಕಾರ ಭಿಕ್ಷೆ ಬೇಡುವುದು ಅಪರಾಧವಾಗಿದೆ ಎಂದು ಇಲಾಖೆಯ ಬೀದರ್ ತಾಲ್ಲೂಕು ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲ್ದೊಡ್ಡಿ ಹೇಳಿದರು.
ರಾಜ್ಯವನ್ನು ಸಂಪೂರ್ಣ ಭಿಕ್ಷಾಟನೆ ಮುಕ್ತಗೊಳಿಸಲು ಹಾಗೂ ಭಿಕ್ಷುಕರನ್ನು ಸ್ವಾವಲಂಬಿಯಾಗಿಸಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದ್ದು, ಪ್ರಯಾಣಿಕರು ಭಿಕ್ಷುಕರು ಕಂಡು ಬಂದರೆ ಟೋಲ್ ಫ್ರೀ ಸಂಖ್ಯೆ 10581 ಸಂಪರ್ಕಿಸಬೇಕು ಎಂದು ಮನವಿ ಮಾಡಿದರು.
ಇಲಾಖೆಯ ಹಾಸ್ಟೆಲ್ ವಾರ್ಡನ್ ನಿವರ್ತಿ ಸಜ್ಜನ್, ಧನರಾಜ, ರಾಜಶೇಖರ, ಭೀಮರಾವ್, ಸಿಬ್ಬಂದಿ ಹಣಮಂತ ಸ್ವಾಮಿ ಮತ್ತಿತರರು ಇದ್ದರು.