ಸಿದ್ಧಾರೂಢ ಮಠದಲ್ಲಿ ಪ್ರವಚನ

Shivkumar Swamiji
Published on

ಬೀದರ್: ಶ್ರಾವಣ ಪ್ರಯುಕ್ತ ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಜುಲೈ 30 ರಿಂದ ಆಗಸ್ಟ್ 23 ರ ವರೆಗೆ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರು ಪ್ರತಿ ದಿನ ಸಂಜೆ 7 ರಿಂದ 8 ರ ವರೆಗೆ ಶ್ರೀಮನ್ನಿಜಗುಣ ಶಿವಯೋಗಿ ವಿರಚಿತ ‘ಕೈವಲ್ಯ ಪದ್ಧತಿ' ಗ್ರಂಥದ ‘ನೀತಿ ಕ್ರಿಯಾಚಾರ್ಯಸ್ಥಲ' ಕುರಿತು ಪ್ರವಚನ ನೀಡಲಿದ್ದಾರೆ.

ಶ್ರೀಗಳ ಸಾನಿಧ್ಯದಲ್ಲಿ ಪ್ರತಿ ದಿನ ಬೆಳಿಗ್ಗೆ 7ಕ್ಕೆ ಸಿದ್ಧಾರೂಢರ ಮೂರ್ತಿಗೆ ರುದ್ರಾಭಿಷೇಕ, ಶ್ರೀಗಳ ಪಾದಪೂಜೆ, ಸಂಜೆ 6 ರಿಂದ 7 ರ ವರೆಗೆ ಭಜನೆ ಜರುಗಲಿದೆ.

ಭಕ್ತರು ಶ್ರಾವಣದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದ್ಗುರುವಿನ ಕೃಪೆಗೆ ಪಾತ್ರರಾಗಬೇಕು ಎಂದು ಮಠದ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net