

ಬೀದರ್: ಶ್ರಾವಣ ಮಾಸ ನಿಮಿತ್ತ ಇಲ್ಲಿಯ ಶರಣ ಉದ್ಯಾನದಲ್ಲಿ ಜು.25ರಿಂದ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಅವರು ಒಂದು ತಿಂಗಳು ಪ್ರವಚನ ನೀಡಲಿದ್ದಾರೆ. ನಿತ್ಯ ಸಂಜೆ 6ಕ್ಕೆ ಚಾಮರಸನ ಪ್ರಭುಲಿಂಗ ಲೀಲೆ ವಿಷಯ ಕುರಿತು ಪ್ರವಚನ ನೀಡಲಿದ್ದಾರೆ.
ಪ್ರವಚನ ನಿಮಿತ್ತ ಇಲ್ಲಿನ ಶರಣ ಉದ್ಯಾನದಲ್ಲಿ ಆಯೋಜಿಸಿದ ಪೂರ್ವಭಾವಿ ಸಭೆಯಲ್ಲಿ ಪ್ರಸಕ್ತ ಸಾಲಿನ ಪ್ರವಚನ ಆಯೋಜನೆ ಸಮಿತಿ ಅಧ್ಯಕ್ಷರಾಗಿ ಆದರ್ಶ ಕಾಲನಿಯ ನೀಲಮ್ಮನ ಬಳಗದ ಜ್ಞಾನದೇವಿ ಬಬಝಡೆ ಅವರನ್ನು ನೇಮಿಸಲಾಯಿತು. ಪ್ರವಚನದ ಜೊತೆಗೆ ವಚನ ಭಜನೆ, ವಚನ ಸಂಗೀತ ಹಾಗೂ ಗುರು ಬಸವ ಪ್ರಾರ್ಥನೆ ಪೂಜೆ ನಡೆಸಲು ತೀರ್ಮಾನಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಆಡಳಿತಾಕಾರಿ ಶಂಕ್ರೆಪ್ಪ ಹೊನ್ನಾ ಕೋರಿದ್ದಾರೆ.