

ಬೀದರ್: ಬಾವಗಿಯ ಶ್ರೀ ಭದ್ರೇಶ್ವರ ಮಠದಲ್ಲಿ ಶ್ರಾವಣ ಮಾಸ ನಿಮಿತ್ತ ಜು.25ರಿಂದ ಆ.25ರವರೆಗೆ ಚಕ್ರ ಭಜನೆ ಆಯೋಜಿಸಲಾಗಿದೆ ಎಂದು ಮಠದ ಶಿವಕುಮಾರ ಸ್ವಾಮಿ ತಿಳಿಸಿದ್ದಾರೆ.
ಪ್ರತಿದಿನ ರಾತ್ರಿ 9ಕ್ಕೆ ಚಕ್ರ ಭಜನೆ ಆರಂಭವಾಗಿ ಸತತ 24 ಗಂಟೆ ನಡೆಯಲಿದೆ. ನಂತರ ಇನ್ನೊಂದು ತಂಡದವರು ಆರಂಭಿಸಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ.