

ಭಾಲ್ಕಿ: ನಾಮಪತ್ರ ಸಲ್ಲಿಕೆ, ಚುನಾವಣೆ ಪ್ರಚಾರ, ಮತದಾನ ಹಾಗೂ ಪ್ರಧಾನಿ, ಉಪ ಪ್ರಧಾನಿ ಹಾಗೂ ಸಚಿವರ ಆಯ್ಕೆ...
ಇದು ದಾಡಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಶಾಲಾ ಮಕ್ಕಳ ಸಂಸತ್ ಚುನಾವಣೆಯಲ್ಲಿ ಕಂಡುಬಂದ ದೃಶ್ಯ. ಲೋಕಸಭೆ ಚುನಾವಣೆ ಪ್ರಕ್ರಿಯೆಯಂತೆ ಇಲ್ಲಿನ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಮತದಾನ ನಂತರ ಮತ ಎಣಿಕೆ ಮಾಡಿ ಪ್ರಧಾನಿಯಾಗಿ ಅಮೀರ್ ಶಾಬುದ್ದೀನ್ ಹಾಗೂ ಉಪ ಪ್ರಧಾನಿಯಾಗಿ ಮಹೇಶ್ವರಿ ಅಂಬಾದಾಸ ಅವರನ್ನು ಆಯ್ಕೆ ಮಾಡಿದರು. ಬಳಿಕ ಮಂತ್ರಿಮಂಡಲ ರಚಿಸಲಾಯಿತು. ಎಸ್.ಡಿಎಂಸಿ ಅಧ್ಯಕ್ಷ ಗಣಪತಿ ಧಡ್ಡೆ, ಮುಖ್ಯಗುರು ಎಂ.ಡಿ. ಹನೀಫ್, ಶಿಕ್ಷಕರಾದ ಸತೀಶ್ ಸಿದ್ದೇಶ್ವರ, ದೇವಿದಾಸ ಚವ್ಹಾಣ್, ರಾಮದಾಸ ವಾಂಜ್ರೆ, ಜಯಂತಿ, ರೇಖಾ ರಾಜುರೆ ಇತರರಿದ್ದರು.