

ಬೀದರ್: ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೊಮ್ಮಗೊಂಡೇಶ್ವರ ಉತ್ಸವದ ಅಂಗವಾಗಿ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಜನ ಮನಸೂರೆಗೊಂಡಿತು.
ಕಲಾವಿದರು ಭರತನಾಟ್ಯ, ವಚನ ಗಾಯನ, ಚೌಡಕಿ ಪದ, ಗೀ ಗೀ ಪದ, ಮೊಹರಂ ಪದ, ಬೀಸುವ ಪದ, ಕುಟ್ಟುವ ಪದ, ಜೋಗುಳ ಪದ, ಹಲಗೆ ವಾದನ, ಕೋಲಾಟ, ಬುಲಾಯಿ ಮತ್ತಿತರ ಕಲಾ ಪ್ರಕಾರಗಳನ್ನು ಪ್ರದರ್ಶಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.
ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅವರ ನಿರ್ದೇಶನದಲ್ಲಿ ನೃತ್ಯಾಲಯದ ಕಲಾವಿದರು ಆಕರ್ಷಕ ಭರತ ನಾಟ್ಯ ಪ್ರದರ್ಶಿಸಿದರು.
ರಂಗಮ್ಮ, ಕಾಂಚನಾ, ಹುಲೆಪ್ಪ, ಶೇಷಪ್ಪ ಚಿಟ್ಟಾ, ನಾಗಮ್ಮ, ಕನಕರಾಜು, ಮಲ್ಲಿಕಾರ್ಜುನ ಸ್ವಾಮಿ, ಭಾಗ್ಯಶ್ರೀ ದುರ್ಗೆ, ದೇವಿದಾಸ ಚಿಮಕೋಡ್, ಸಂಗೀತಾ ಕಾಂಬಳೆ, ಸಂಗಮ್ಮ, ಸುಭಾಷ್ ಅಲ್ಲಾಪುರ, ಮಲ್ಲಿಕಾರ್ಜುನ ಪಾಟೀಲ, ಲಕ್ಷ್ಮಿ, ಕಾಶಿನಾಥ ಭಂಗೂರೆ, ಪಾರ್ವತಿ ಚಿದ್ರಿ, ಶಕುಂತಲಾ, ಮನೋಹರ ಹುಪಳಾ ಮೊದಲಾದ ಕಲಾವಿದರು ಹಾಗೂ ಕಲಾ ತಂಡದವರು ವಿವಿಧ ಕಲಾ ಪ್ರದರ್ಶನ ನೀಡಿದರು.
ಪ್ರಶಸ್ತಿ ಪುರಸ್ಕøತ ಪತ್ರಕರ್ತರಾದ ಶಶಿಕಾಂತ ಶೆಂಬೆಳ್ಳಿ, ಹಾಜಿಪಾಶಾ(ಮೌಲಾನಾ ಸಾಬ್) ಬಾಳೂರ, ಪತ್ರಿಕಾ ಛಾಯಾಗ್ರಾಹಕ ಗೋಪಿಚಂದ್ ತಾಂದಳೆ, ಸಾಮಾಜಿಕ ಸೇವೆಗಾಗಿ ರಾಜಕುಮಾರ ಕಂದಗೂಳೆ (ಕುರುಬ) ಸಮಾಜದ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ, ಜೆಇಇ, ಕೆಇಸಿಟಿ ಹಾಗೂ ನೀಟ್ ಸಾಧಕರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ್ ಚಿದ್ರಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಚಿದ್ರಿ, ಮಾಜಿ ಸದಸ್ಯ ಬಾಬುರಾವ್ ಮಲ್ಕಾಪುರ, ಶ್ರೀ ಸಿದ್ಧರಾಮೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ. ರೂಪೇಶ್ ಎಕಲಾರಕರ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ, ಖಜಾಂಚಿ ದೇವಪ್ಪ ಚಾಂಬೋಳೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ, ಡಾ. ಜಿ.ಬಿ. ಮಲ್ಲಿಕಾರ್ಜುನ, ಶಂಭುಲಿಂಗ ವಾಲ್ದೊಡ್ಡಿ, ರಾಣಿ ಸತ್ಯಮೂರ್ತಿ, ಪಿ.ಎಸ್. ಇಟಕಂಪಳ್ಳಿ, ಭೀಮಸಿಂಗ್ ಮಲ್ಕಾಪುರ, ಬಾಬುರಾವ್ ಬರಿದಾಬಾದ್, ಶಿವಕುಮಾರ ಕುಪ್ಪೆ, ಮಲ್ಲಿಕಾರ್ಜುನ ಬಾವಗೆ, ಕಲ್ಲಪ್ಪ ರಾಯಗೊಂಡ, ಕೆ.ಡಿ. ಗಣೇಶ, ಮಲ್ಲಿಕಾರ್ಜುನ ಮುರ್ಕೆ, ಲೋಕೇಶ ಮರ್ಜಾಪುರ, ದೀಪಕ್ ಚಿದ್ರಿ, ಮಲ್ಲಿಕಾರ್ಜುನ ಸಾತೋಳೆ, ಕಲ್ಲಪ್ಪ ಬೆನಕನಳ್ಳಿ, ಶಶಾಂಕ ಬರಗಾಲೆ, ಗೊಂಡ ಬಾಬುರಾವ್, ಭೀಮಷಾ ಬಸಲಾಪುರ, ಸಂತೋಷ ಮೇತ್ರೆ ಜನವಾಡ, ಸಿದ್ದು ಬಾವಗಿ, ಬಾಲಾಜಿ ಜಬಾಡೆ ಮೊದಲಾದವರು ಇದ್ದರು.
ಸುನೀಲ್ ಚಿಲ್ಲರ್ಗಿ ಸ್ವಾಗತಿಸಿದರು. ಎಂ.ಪಿ. ವೈಜಿನಾಥ ವೈಜಿನಾಥ ನಿರೂಪಿಸಿದರು. ವಿಜಯಕುಮಾರ ಬ್ಯಾಲಹಳ್ಳಿ ವಂದಿಸಿದರು.