

ಬೀದರ್: ಗುರು ಪೂರ್ಣಿಮೆ ನಿಮಿತ್ತ ಆರ್ಟ್ ಆಫ್ ಲಿವಿಂಗ್ ಬೀದರ್ ತಂಡದಿಂದ ಇಲ್ಲಿಯ ಗುಂಪಾ ರಸ್ತೆಯಲ್ಲಿ ಇರುವ ಸಿದ್ಧಾರೂಢ ಮಠದ ಎದುರಿನ ಪೋಲಾ ಪಂಕ್ಷನ್ ಹಾಲ್‍ನಲ್ಲಿ ಗುರುವಾರ 108 ಜನರ ಸಾಮೂಹಿಕ ಗುರು ಪೂಜೆ ಸಂಕಲ್ಪ ಹಾಗೂ ಮಹಾ ಸತ್ಸಂಗ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ರವಿಶಂಕರ ಗುರೂಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತಿ ಅರ್ಪಣೆ ಮಾಡಿದರು.
ಆರ್ಟ್ ಆಫ್ ಲಿವಿಂಗ್ ಬೀದರ್ ಜಿಲ್ಲಾ ಅಭಿವೃದ್ಧಿ ಸಮಿತಿಯ ಸದಸ್ಯ ಕಾಮಶೆಟ್ಟಿ ಚಿಕ್ಕಬಸೆ ಮಾತನಾಡಿ, ಗುರು ಒಬ್ಬರು ವ್ಯಕ್ತಿಯಲ್ಲ. ಅವರೊಬ್ಬ ಶಕ್ತಿ ಎಂದು ಬಣ್ಣಿಸಿದರು.
ಗುರು ನಮ್ಮ ಬದುಕು ಹಸನಾಗಿಸುತ್ತಾರೆ. ಮುಕ್ತಿಯ ಮಾರ್ಗ ತೋರುತ್ತಾರೆ. ಗುರುವನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.
ಡಾ. ಲೋಕೇಶ ಹಿರೇಮಠ, ಶಿವಲೀಲಾ ಚಿದ್ರೆ, ದಾನೇಶ್ವರಿ ಸತ್ಸಂಗ ನಡೆಸಿಕೊಟ್ಟರು.
ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಸಂಯೋಜಕ ಶಿವಾನಂದ, ಜಿಲ್ಲಾ ಅಭಿವೃದ್ಧಿ ಸಮಿತಿ ಸದಸ್ಯ ರಾಮಕೃಷ್ಣ ಸಾಳೆ, ಯೋಗ ಶಿಕ್ಷಕ ಅಶೋಕ, ಸ್ವರೂಪಾ ದಿಗಂಬರ ಪೋಲಾ, ಸಂಗೀತಾ ಅಶೋಕ ರೇಜಂತಲ್, ಉಮಾದೇವಿ ಶ್ರೀನಿವಾಸ್ ಗಾದಾ, ರಜನಿ ಸಿಂಗಾ, ಮಂಜುಳಾ ಲಾಲಜಿ ಪಟೇಲ್, ಬಸವಶ್ರೀ ಸ್ವಾಮಿ, ಮಂಗಲಾ ಹಿರೇಗೌಡ, ಮಲ್ಲಿಕಾರ್ಜುನ ಅಲಿಯಂಬರ್, ಬಸವಶ್ರೀ ಸ್ವಾಮಿ, ರೇಣುಕಾ ರಾಜಶೇಖರ ತೆಲಗಾಣಿ, ಗಂಗಾ ಸ್ವಾಮಿ, ಲಲಿತಾ ಮೋಳಕೇರಿ, ಜ್ಯೋತಿ ದಾಡಗೆ, ಉಮಾದೇವಿ ಹೂಗಾರ್, ರಾಕೇಶ್ ಚಿಲ್ಲಶೆಟ್ಟಿ, ಕೇದಾರನಾಥ ವೀರಶೆಟ್ಟಿ ರಿಕ್ಕೆ, ರತ್ನಪ್ಪ ಕಲಬುರಗಿ, ಅನಿಲಕುಮಾರ, ಅರುಣಾ ರಾಜಕುಮಾರ ಅಳ್ಳೆ, ದೀಪ್ತಿ ಪಾಂಡುಂಗ, ತುಳಸಿ, ರುಕ್ಮಿಣಿ, ಹುಲೆಪ್ಪ ರೆಡ್ಡಿ, ಶಿವರಾಜ, ಸತ್ಯಪ್ರಕಾಶ್, ಶೈಲಜಾ ಸಿಂಗ್ ಮತ್ತಿತರರು ಇದ್ದರು.