ಪ್ರೇಕ್ಷಕರ ರಂಜಿಸಿದ ಭಸ್ಮಾಸುರ-ಮೋಹಿನಿ!

Yakshgaan - Copy
Published on

ಬೀದರ್: ದಕ್ಷಿಣ ಕರಾವಳಿ ಕನ್ನಡ ಸಂಘವು ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನವು ಪ್ರೇಕ್ಷಕರ ಮನ ರಂಜಿಸಿತು.

ಯಕ್ಷಗಾನದ ಮೂಲಕ ಪ್ರದರ್ಶಿಸಿದ ಪೌರಾಣಿಕ ಭಸ್ಮಾಸುರ-ಮೋಹಿನಿ ಕಥಾ ಪ್ರಸಂಗವು ಮೂರು ಗಂಟೆ ಪ್ರೇಕ್ಷಕರನ್ನು ಪುರಾಣ ಲೋಕಕ್ಕೆ ಕರೆದೊಯ್ದಿತು.

ಭಸ್ಮಾಸುರ, ಮೋಹಿನಿ ಹಾಗೂ ಇತರ ಪಾತ್ರಧಾರಿಗಳು ಮನೋಜ್ಞ ಅಭಿಯನದೊಂದಿಗೆ ಕರತಾಡನಕ್ಕೆ ಪಾತ್ರರಾದರು.

ಕಲಾವಿದರ ವೇಷ ಭೂಷಣ, ಗೆಜ್ಜೆ ಶಬ್ದ, ಸಂಭಾಷಣೆಗಳು ಮನಸೂರೆಗೊಂಡವು.

ಉಡುಪಿ ಜಿಲ್ಲೆಯ ಮಂದರ್ತಿಯ ಶ್ರೀ ಮಹಾ ಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರು ಹಾಸ್ಯದ ಜತೆ ಭಸ್ಮಾಸುರ-ಮೋಹಿನಿ ಕಥಾ ಪ್ರಸಂಗ ಪ್ರದರ್ಶಿಸಿದರು.

ದಿನಕರ ಕುಂದರ್ ನಡೂರು, ನಾಗರಾಜ ಪೂಜಾರಿ ದೇವಲ್ಕುಂದ, ರಾಜೇಶ ಶೆಟ್ಟಿ ಮೇಗರವಳ್ಳಿ ಸ್ತ್ರೀ ಪಾತ್ರ, ಚಿಟ್ಟಾಣಿ ನರಸಿಂಹ ಹೆಗಡೆ, ವಿಶ್ವನಾಥ ಪೂಜಾರಿ, ಹರೀಶ್ ಚಂದ್, ನಂದೀಶಕುಮಾರ, ಪ್ರಮೋದ್ ಪೂಜಾರಿ, ರಜಿತಕುಮಾರ ಪುರುಷ ಪಾತ್ರ, ಸತೀಶಕುಮಾರ ಹಾಲಾಡಿ ಹಾಸ್ಯ ಪಾತ್ರ, ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಬ್ರಹ್ಮ ದೇವರ ಪಾತ್ರ ನಿರ್ವಹಿಸಿದರು. ಕೊಕ್ಕರ್ಣೆ ಸದಾಶಿವ ಅಮೀನ್, ಗಣೇಶ ಆಚಾರ್ಯ ಬಿಲ್ಲಾಡಿ ಗಾಯನ ಪ್ರಸ್ತುತಪಡಿಸಿದರೆ, ಭಾಸ್ಕರ ದೇವಾಡಿಗ ಭಟ್ಕಳ, ಕುಮಾರ ಅಮೀನ್ ಕೊಕ್ಕರ್ಣೆ ಮೃದಂಗ ನುಡಿದರು. ದಿನೇಶ್ ಪೂಜಾರಿ ವೇಷ ಭೂಷಣ, ಕೃಷ್ಣಶೆಟ್ಟಿ ಶಿವಪುರ ಧ್ವನಿವರ್ಧಕ ಸೇವೆ ಒದಗಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಯಕ್ಷಗಾನ ಪ್ರದರ್ಶನಕ್ಕೆ ಚಾಲನೆ ನೀಡಿದರು.

ವಿಶ್ವ ಹಿಂದೂ ಪರಿಷತ್ತಿನ ರಾಮಕೃಷ್ಣ ಸಾಳೆ, ದಕ್ಷಿಣ ಕರಾವಳಿ ಕನ್ನಡ ಸಂಘದ ಅಧ್ಯಕ್ಷ ಕೆ. ಸತ್ಯಮೂರ್ತಿ, ಪ್ರಮುಖರಾದ ದಯಾನಂದ ಶೆಟ್ಟಿ, ವೀರಶೆಟ್ಟಿ ಖ್ಯಾಮಾ, ಎ.ಎಸ್. ಪ್ರಭಾಕರ, ರಾಘವೇಂದ್ರ ಅಡಿಗ, ಶಂಭುಲಿಂಗ ವಾಲ್ದೊಡ್ಡಿ, ರಾಜೇಶ್ ಕೆ. ರಾವ್, ರಘುರಾಮ ಉಪಾಧ್ಯಾಯ, ಉಮೇಶ ನಾಯಕ್, ಸತೀಶ್ ಕೋಟ್ಯಾನ್, ಶ್ರೀನಿವಾಸ್, ರವಿಚಂದ್ರ ಮೂರ್ತಿ, ಬಾಲಕೃಷ್ಣ ಶೆಟ್ಟಿ, ರೇಖಾ ಸೌದಿ, ಭಾನುಪ್ರಿಯ ಅರಳಿ, ನಾಗರಾಜ ನಾಯ್ಕ, ಕಿರಣ ಮೂರ್ತಿ, ಶಾರದ ಶೆಟ್ಟಿ, ಭಾಗ್ಯಲಕ್ಷ್ಮಿ, ಉದಯಶೆಟ್ಟಿ, ಸುರೇಶ್ ಆಚಾರ್ಯ, ಬಸವರಾಜ ಮೂಲಗೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net