ಗುರುವಿಗೆ ರಕ್ತದಲ್ಲಿ ಬಿಡಿಸಿದ ಚಿತ್ರ ಸಮರ್ಪಣೆ

Johnson Ghoode Blood Photo - Copy
Published on

ಬೀದರ್: ಕಾಂಗ್ರೆಸ್ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಜಾನಸನ್ ಘೋಡೆ ಅವರು ಗುರು ಪೂರ್ಣಿಮೆ ಪ್ರಯುಕ್ತ ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಅವರಿಗೆ ತಮ್ಮ ರಕ್ತದಲ್ಲಿ ಬಿಡಿಸಿದ ಚಿತ್ರ ಸಮರ್ಪಿಸಿ ಗಮನ ಸೆಳೆದಿದ್ದಾರೆ.

ಜಿಡಗಾದಲ್ಲಿ ಗುರುವಾರ ಮುರುಘರಾಜೇಂದ್ರ ಶ್ರೀಗಳಿಗೆ ಚಿತ್ರ ಹಸ್ತಾಂತರಿಸಿದರು.

ಮುರುಘರಾಜೇಂದ್ರ ಸ್ವಾಮೀಜಿ ಅವರ ಮೇಲೆ ನನಗೆ ಅಪಾರ ಭಕ್ತಿ ಇದೆ. ಹೀಗಾಗಿ ಗುರು ಪೂರ್ಣಿಮೆ ಅಂಗವಾಗಿ ನನ್ನ ರಕ್ತದಲ್ಲಿ ಕಲಾವಿದರೊಬ್ಬರಿಂದ ಮುರುಘರಾಜೇಂದ್ರ ಸ್ವಾಮೀಜಿ ಅವರ ಸುಂದರ ಚಿತ್ರ ಬಿಡಿಸಿ ಅವರಿಗೆ ಕೊಟ್ಟಿರುವೆ ಎಂದು ಜಿಲ್ಲೆಯವರೇ ಆದ ಜಾನಸನ್ ಘೋಡೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net