ಸೋಮಶೆಟ್ಟಿ ಆರ್ಟ್ ಗ್ಯಾಲರಿಗೆ ರೂ. 50 ಸಾವಿರ ದೇಣಿಗೆ

BKD Foundation
Published on

ಬೀದರ್: ನಿವೃತ್ತ ಚಿತ್ರಕಲಾ ಶಿಕ್ಷಕ ಸಿ.ಬಿ. ಸೋಮಶೆಟ್ಟಿ ಅವರು ಇಲ್ಲಿಯ ಬಸವನಗರದಲ್ಲಿ ನಿರ್ಮಿಸಿರುವ ಬಸವಣ್ಣನವರ ಜೀವನ ಚರಿತ್ರೆ ಬಿಂಬಿಸುವ ಚಿತ್ರಗಳ ‘ಸಿ.ಬಿ. ಸೋಮಶೆಟ್ಟಿ ಆರ್ಟ್ ಗ್ಯಾಲರಿ’ಗೆ ಬಸವ ಕಾಯಕ ದಾಸೋಹ (ಬಿಕೆಡಿ) ಫೌಂಡೇಷನ್ ರೂ. 50 ಸಾವಿರ ದೇಣಿಗೆ ನೀಡಿದೆ.

ಭಾನುವಾರ ನಡೆದ ಆರ್ಟ್ ಗ್ಯಾಲರಿಯ ಉದ್ಘಾಟನಾ ಸಮಾರಂಭದಲ್ಲಿ ಫೌಂಡೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಅವರು ಆರ್ಟ್ ಗ್ಯಾಲರಿಯ ಸ್ಥಾಪಕ ಸಿ.ಬಿ. ಸೋಮಶೆಟ್ಟಿ ಅವರಿಗೆ ದೇಣಿಗೆಯ ಚೆಕ್ ಹಸ್ತಾಂತರಿಸಿದರು.

ಸಿ.ಬಿ. ಸೋಮಶೆಟ್ಟಿ ನಾಡಿನ ಖ್ಯಾತ ಚಿತ್ರಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಬಸವಣ್ಣನವರ ಜನ್ಮದಿಂದ ಲಿಂಗೈಕ್ಯದವರೆಗಿನ ಪ್ರಮುಖ ಘಟನಾವಳಿಗಳ ಮೇಲೆ ಬೆಳಕು ಚೆಲ್ಲುವ ಚಿತ್ರಗಳನ್ನು ಬಿಡಿಸಿ, ಸ್ವಂತ ಹಣದಲ್ಲಿ ಆರ್ಟ್ ಗ್ಯಾಲರಿ ನಿರ್ಮಿಸಿರುವ ಅವರ ಕಾರ್ಯ ಶ್ರೇಷ್ಠವಾದದ್ದು ಎಂದು ಬಸವರಾಜ ಧನ್ನೂರ ಹೇಳಿದರು.

ಬಸವಣ್ಣ, ಬಸವಾದಿ ಶರಣರ ಕುರಿತ ಅವರ ಅಧ್ಯಯನ, ಚಿತ್ರ ರಚನೆಗೆ ಕೊಟ್ಟ ಸಮಯ, ಶ್ರಮ, ಭಕ್ತಿ ಹಾಗೂ ನಿಷ್ಠೆ ಪ್ರಶಂಸನೀಯ ಎಂದು ತಿಳಿಸಿದರು.

ಫೌಂಡೇಷನ್ ಬಸವಾದಿ ಶರಣರ ತತ್ವಗಳ ಪ್ರಚಾರ ಹಾಗೂ ಪ್ರಸಾರಕ್ಕೆ ಪ್ರೋತ್ಸಾಹ ನೀಡುತ್ತ ಬಂದಿದೆ. ಬಸವಣ್ಣನವರ ಜೀವನ ಚರಿತ್ರೆಯ ಚಿತ್ರಗಳ ಆರ್ಟ್ ಗ್ಯಾಲರಿ ನಿರ್ಮಿಸಿದ್ದಕ್ಕಾಗಿ ಸಿ.ಬಿ. ಸೋಮಶೆಟ್ಟಿ ಅವರಿಗೆ ದೇಣಿಗೆ ಕೊಡಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net