

ಬೀದರ್: ದಕ್ಷಿಣ ಕರಾವಳಿ ಕನ್ನಡ ಸಂಘದ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜುಲೈ 9 ರಂದು ಸಂಜೆ 5.30ಕ್ಕೆ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಉಡುಪಿ ಜಿಲ್ಲೆಯ ಮಂದರ್ತಿಯ ಶ್ರೀ ಮಹಾ ಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರು ‘ಭಸ್ಮಾಸುರ ಮೋಹಿನಿ' ಹಾಸ್ಯಮಯ ಪೌರಾಣಿಕ ಕಥಾ ಭಾಗವನ್ನು ಯಕ್ಷಗಾನದ ಮೂಲಕ ಪ್ರದರ್ಶಿಸಲಿದ್ದಾರೆ.
ಕೊಕ್ಕರ್ಣೆ ಸದಾಶಿವ ಅಮೀನ್, ಗಣೇಶ ಆಚಾರ್ಯ ಬಿಲ್ಲಾಡಿ ಗಾಯನ, ಭಾಸ್ಕರ ದೇವಾಡಿಗ ಭಟ್ಕಳ, ಕುಮಾರ ಅಮೀನ್ ಕೊಕ್ಕರ್ಣೆ ಮೃದಂಗ, ಸತೀಶಕುಮಾರ ಹಾಲಾಡಿ ಹಾಸ್ಯ ಪಾತ್ರ, ದಿನಕರ ಕುಂದರ್ ನಡೂರು, ನಾಗರಾಜ ಪೂಜಾರಿ ದೇವಲ್ಕುಂದ, ರಾಜೇಶ ಶೆಟ್ಟಿ ಮೇಗರವಳ್ಳಿ ಸ್ತ್ರೀ ಪಾತ್ರ, ಚಿಟ್ಟಾಣಿ ನರಸಿಂಹ ಹೆಗಡೆ, ವಿಶ್ವನಾಥ ಪೂಜಾರಿ, ಹರೀಶ್ ಚಂದ್, ನಂದೀಶಕುಮಾರ, ಪ್ರಮೋದ್ ಪೂಜಾರಿ, ರಜಿತಕುಮಾರ ಪುರುಷ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ದಿನೇಶ್ ಪೂಜಾರಿ ವೇಷ ಭೂಷಣ, ಕೃಷ್ಣ ಶೆಟ್ಟಿ ಶಿವಪುರ ಧ್ವನಿವರ್ಧಕ ಸೇವೆ ನೀಡಲಿದ್ದಾರೆ ಎಂದು ಬೀದರ್‍ನ ದಕ್ಷಿಣ ಕರಾವಳಿ ಕನ್ನಡ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ್ದಾರೆ.