ಆನಂದಮಯ ಜೀವನಕ್ಕೆ ಯೋಗ ಸಹಕಾರಿ

Patanjali Yoga Samiti
Published on

ಬೀದರ್: ಒತ್ತಡ ರಹಿತ ಆನಂದಮಯ ಜೀವನಕ್ಕೆ ಯೋಗ ಸಹಕಾರಿಯಾಗಿದೆ ಎಂದು ಬರ್ದಿಪುರ ಆಶ್ರಮದ ಡಾ. ಮಹಾಂತ ಮಹಾ ಮಂಡಲೇಶ್ವರ ಸಿದ್ಧೇಶ್ವರ ಆನಂದಗಿರಿ ಮಹಾರಾಜ್ ಹೇಳಿದರು.

ನಗರದ ಚಿಟ್ಟಾ ರಸ್ತೆಯಲ್ಲಿ ಇರುವ ಶ್ರೀ ದತ್ತಗಿರಿ ಮಹಾರಾಜ್ ಪದವಿಪೂರ್ವ ಕಾಲೇಜಿನಲ್ಲಿ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯೋಗವು ಮನಸ್ಸು, ಶರೀರ ಹಾಗೂ ಉಸಿರನ್ನು ಒಂದಾಗಿಸುತ್ತದೆ. ಮನುಷ್ಯನನ್ನು ಪರಮಾತ್ಮನೆಡೆಗೆ ಕರೆದೊಯ್ಯುತ್ತದೆ. ಸದೃಢ ಸಮಾಜ ಹಾಗೂ ದೇಶ ನಿರ್ಮಾಣಕ್ಕಾಗಿ ಎಲ್ಲರೂ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಭಾರತ ಶೇಷ್ಠ ಸನಾತನ ಸಂಸ್ಕøತಿಯ ಭಂಡಾರವಾಗಿದೆ. ವೇದ, ಉಪ ನಿಷತ್ತು, ಶಾಸ್ತ್ರ, ಆಗಮ, ಪುರಾಣಗಳು ಬದುಕಿನ ಮಾರ್ಗ ಕಲಿಸುತ್ತವೆ ಎಂದು ಹೇಳಿದರು.

ಯೋಗ ಪಾತ್ಯಕ್ಷಿಕೆ ನಡೆಸಿಕೊಟ್ಟ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಯೋಗೇಂದ್ರ ಯದಲಾಪುರೆ ಮಾತನಾಡಿ, ಯೋಗವು ಪಾದದಿಂದ ಶಿರದ ವರೆಗಿನ ರೋಗಗಳನ್ನು ನಿವಾರಿಸುತ್ತದೆ. ಕ್ಯಾನ್ಸರ್, ರಕ್ತದೊತ್ತಡ, ಮಧುಮೇಹ, ಮೂತ್ರ ಪಿಂಡದ ಸಮಸ್ಯೆ ಹಾಗೂ ಮಾನಸಿಕ ಖಿನ್ನತೆಯನ್ನು ದೂರವಾಗಿಸುತ್ತದೆ ಎಂದು ತಿಳಿಸಿದರು.

ಯೋಗ ಒಂದು ಕಸರತ್ತು ಅಥವಾ ವ್ಯಾಯಾಮ ಅಲ್ಲ. ಅದೊಂದು ಜೀವನ ಪದ್ಧತಿ. ಸಹಜ ಹಾಗೂ ಸುಖಿ ಜೀವನದ ಸೂತ್ರವೇ ಯೋಗ. ಆರೋಗ್ಯ ಉತ್ತಮವಾಗಿದ್ದರೆ ಎಲ್ಲವನ್ನೂ ಸಾಧಿಸಬಹುದು. ಸದೃಢ ಆರೋಗ್ಯಕ್ಕೆ ಯೋಗ ಅವಶ್ಯಕ ಎಂದು ಹೇಳಿದರು.

ನಗರಸಭೆ ಮಾಜಿ ಸದಸ್ಯ ಧನರಾಜ ಹಂಗರಗಿ ಮಾತನಾಡಿ, ಯೋಗದಿಂದ ದೈಹಿಕ ಹಾಗೂ ಮಾನಸಿಕ ನೆಮ್ಮದಿ ದೊರೆಯುತ್ತದೆ. ಉಲ್ಲಾಸಮಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾಳೆ ಮಾತನಾಡಿ, ಯೋಗವು ಭಾರತಕ್ಕೆ ಋಷಿ, ಮುನಿಗಳು ನೀಡಿದ ಮಹಾಶಕ್ತಿ. ಅಷ್ಟು ಮಾತ್ರವಲ್ಲದೆ, ಅವರು ಆಚಾರ, ವಿಚಾರಗಳು ಹೇಗಿರಬೇಕು ಎಂಬುದ್ದನ್ನೂ ಹೇಳಿಕೊಟ್ಟಿದ್ದಾರೆ. ಅವುಗಳನ್ನು ನಿತ್ಯ ಜೀವನದಲ್ಲಿ ಪಾಲಿಸಿದ್ದಲ್ಲಿ ಬದುಕು ಸುಂದರವಾಗುತ್ತದೆ ಎಂದು ಹೇಳಿದರು.

ದೇಶಪಾಂಡೆ ಸಾಹಿತ್ತಿಕ ಮತ್ತು ಸಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಜಿ. ದೇಶಪಾಂಡೆ ಮಾತನಾಡಿ, ಶರೀರದ ಜೀವ ಕೋಶಗಳು ಕ್ರಿಯಾಶೀಲವಾಗಿರಲು ನಿತ್ಯ ಯೋಗಾಭ್ಯಾಸ ಮಾಡಬೇಕು. ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಫಾಸ್ಟ್‍ಫುಡ್, ಜಂಕ್ ಫುಡ್, ರಾಸಾಯನಿಕ ಪದಾರ್ಥಗಳಿಂದ ದೂರವಿರಬೇಕು ಎಂದು ತಿಳಿಸಿದರು.

ಯುವ ಉದ್ಯಮಿ ಅಮೃತರಾವ್ ಪಾಟೀಲ ಮಾತನಾಡಿದರು. ಆಶಾರಾಣಿ ಹೌದಖಾನಿ ಕಮಠಾಣ ಯೋಗ ಪ್ರದರ್ಶನ ನೀಡಿದರು. ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳು ಹಾಗೂ ಯೋಗ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಶ್ರೀ ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಹತ್ತಿ ಅಧ್ಯಕ್ಷತೆ ವಹಿಸಿದ್ದರು. ಅಂತರರಾಷ್ಟ್ರೀಯ ನೆಚರೋಪತಿ ಆರ್ಗನೈಸೇಷನ್ ಬೀದರ್ ಘಟಕದ ಅಧ್ಯಕ್ಷ ಗೋರಕನಾಥ ಕುಂಬಾರ ವೇದಿಕೆಯಲ್ಲಿದ್ದರು.

ಪ್ರಮುಖರಾದ ರವೀಂದ್ರ ಗಚ್ಚಿನಮನಿ, ನಾಗರಾಜ ಸ್ವಾಮಿ ಕಮಠಾಣ, ಸಂತೋಷ್ ಶೇರಿಕಾರ್, ಸಂತೋಷ್ ಬೆಲ್ದಾಳೆ, ಬಸವರಾಜ ಬುಳ್ಳಾ, ಮಲ್ಲಿಕಾರ್ಜುನ ನೆಲವಾಡ, ಶಿವಮೂರ್ತಿ ಬಟನಾಪುರೆ, ವಿಶ್ವನಾಥ ಮಠಪತಿ, ವೈಜಿನಾಥ ಬಿರಾದಾರ, ವಿಜಯಕುಮಾರ ಬಾಬಣೆ, ರವಿ ತೆಲಗಾಣೆ, ಅಣ್ಣಯ್ಯ ಸ್ವಾಮಿ, ಜಗನ್ನಾಥ ಭಂಗೂರೆ, ರಾಘವೇಂದ್ರ ಕುಲಕರ್ಣಿ, ಕಲ್ಲಪ್ಪ ಮುಗಟೆ, ವಿಜಯ ಮಹಾಂತೇಶ್, ರೇವಣಪ್ಪ ಮೂಲಗೆ, ಡಾ. ಬಸವರಾಜ ಬಲ್ಲೂರ, ಜಗನ್ನಾಥ ಕಮಲಾಪುರೆ, ಸತ್ಯವಾನ್ ಚಾಂಡೇಶ್ವರೆ, ಶಿವಶರಣಪ್ಪ ಮೂಲಗೆ, ರಮೇಶ ಬಿರಾದಾರ, ಚಂದ್ರಕಾಂತ ಪಟ್ನೆ, ಗುರುನಾಥ ಮೂಲಗೆ, ಶರಣಪ್ಪ ದಾನಾ, ಡಾ. ವೈಜಿನಾಥ ಬಿರಾದಾರ, ಬಸವರಾಜ ಮೂಲಗೆ, ಶಿವಾನಂದ ಡೊಣ್ಣೆ, ಗುರಪ್ಪ ಗಿರಮಲ್, ಸಂಜುಕುಮಾರ ಅಷ್ಟೂರೆ, ಈಶ್ವರ ರೂಪನೋರ್, ಶಿವಾಜಿ ಭೋಸ್ಲೆ, ಕೃಷ್ಣಾರೆಡ್ಡಿ, ಅಶೋಕ ರೆಡ್ಡಿ, ಉಮಾದೇವಿ ಹೂಗಾರ್, ರಾಜೇಶ್ವರಿ ಕಲೀಮ್, ಮಹಾನಂದಾ, ಜಗದೇವಿ ಸ್ವಾಮಿ, ನಾಗಮಣಿ ರೆಡ್ಡಿ ಯಲ್‍ಚಲ್, ಶಿವಕುಮಾರ ಕೋತಮೀರ್, ನಂದಾ ರಮೇಶ್, ಶಂಕರೆಪ್ಪ ವರದಾ, ಅನಿತಾ ಮಡಿವಾಳ, ವರ್ಷಾ ಮಡಿವಾಳ, ಬಸವರಾಜ ಕೆರಳೆ, ಭದ್ರು ಮಾಳಗೆ, ಕಾಶಿನಾಥ ಸಜ್ಜನಶೆಟ್ಟಿ ರಘುನಾಥ, ವೈಜಿನಾಥ ಬೆಲ್ಲಾಳೆ, ಬಸವಶ್ರೀ ಸ್ವಾಮಿ, ಪೂಜಾ ಸ್ವಾಮಿ, ವಿಲಾಸಮತಿ ಸ್ವಾಮಿ, ಜ್ಯೋತಿ, ಸುಧಾ, ಮಧುಮತಿ, ರೇಣುಕಾ, ಚಂದ್ರಕಲಾ ಕುಲಕರ್ಣಿ, ಸುಮಂಗಲಾ, ವಿಷ್ಣು ಮಡಿವಾಳ, ಪೂರ್ಣಿಮಾ, ರುಕ್ಮಿಣಿ, ಅನಿತಾ, ರಘುನಾಥರಾವ್ ಪಾಂಚಾಳ್, ಕಂಟೆಪ್ಪ ಕಾರಂಜೆ, ವೈಜಿನಾಥ, ಜ್ಯೋತಿ, ಭವಾನಿ, ಶಿವಶರಣಪ್ಪ ಹಣಮಶೆಟ್ಟಿ, ಜ್ಯೋತಿ ತಗಾರೆ ಮತ್ತಿತರರು ಭಾಗವಹಿಸಿದ್ದರು.

ನವೀನ್ ಘುಳೆ ಸ್ವಾಗತಿಸಿದರು. ವೈಜಿನಾಥ ಸ್ವಾಮಿ ನಿರೂಪಿಸಿದರು. ಹುಲೆಪ್ಪ ಬರಿದಾಬಾದೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net